Visitors have accessed this post 315 times.
ಪುತ್ತೂರು: ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅರುಣ್ ಕುಮಾರ್ ಪುತ್ತಿಲರಿಂದ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ದೂರು ನೀಡಿದ್ದಾರೆ. ಜೊತೆಗೆ ದೂರು ಸ್ವೀಕರಿಸಲು ಹಾಗೂ ಅತ್ಯಾಚಾರ ಸೆಕ್ಷನ್ ಹಾಕಲು ಹಿಂದೇಟು ಹಾಕಿದ ಪುತ್ತೂರು ನಗರ ಹಾಗೂ ಮಹಿಳಾ ಠಾಣೆಯ ಅಧಿಕಾರಿಗಳ ವಿರುದ್ಧವೂ ಮಾನವ ಹಕ್ಕುಗಳ ಆಯೋಗಕ್ಕೆ ದೂರಿತ್ತಿದ್ದಾರೆ. ಅರುಣ್ ಪುತ್ತಿಲ ವಿರುದ್ಧ ದೂರು ನೀಡಲು ಮೂರು ದಿನಗಳ ಕಾಲ ಠಾಣೆಗೆ ಅಲೆದಿದ್ದೇನೆ. ಆದರೆ ಪೊಲೀಸರು ದೂರು ಸ್ವೀಕರಿಸಿಲ್ಲ. ಸೆಪ್ಟೆಂಬರ್ 1 ರಂದು ಠಾಣೆಯ ಮುಂದೆ ಧರಣಿ ನಡೆಸಿದ ಬಳಿಕ ದೂರು ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಅದಾಗ್ಯೂ, ಅತ್ಯಾಚಾರ ಪ್ರಕರಣ ದಾಖಲಿಸದೆ ಜಾಮೀನು ಮಂಜೂರಾಗುವ ಸೆಕ್ಷನ್ ಹಾಕಿದ್ದಾರೆ. ದೂರು ನೀಡಲು ಬಂದ ನನಗೆ ಬೆದರಿಕೆ ಕರೆಗಳೂ ಬರುತ್ತಿವೆ. ನನ್ನಂತೆ ಹಲವು ಮಹಿಳೆಯರಿಗೆ ಪುತ್ತಿಲರಿಂದ ಅನ್ಯಾಯವಾಗಿದೆ. ನ್ಯಾಯ ಒದಗಿಸಿಕೊಡುವಂತೆ ಮಾನವ ಹಕ್ಕುಗಳ ಆಯೋಗದ ಮೊರೆ ಹೋದ ಸಂತ್ರಸ್ತ ಮಹಿಳೆ.