June 13, 2026
WhatsApp Image 2025-09-14 at 1.01.00 PM

ಮೈಸೂರು: ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಜವರೇಗೌಡನ ಕೊಪ್ಪಲಿನಲ್ಲಿ ತಾಯಿಯೊಬ್ಬಳು ತನ್ನಿಬ್ಬರು ಕಂದಮ್ಮಗಳನ್ನು ಕೊಲೆ ಮಾಡಿ, ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಮೂರು ವರ್ಷದ ಧ್ರುತಿ ಹಾಗೂ ಒಂದೂವರೆ ವರ್ಷದ ದಿಶಾ ತಾಯಿಯ ಕ್ರೌರ್ಯಕ್ಕೆ ಬಲಿಯಾದ ದುರ್ದೈವಿ ಮಕ್ಕಳಾಗಿದ್ದಾರೆ. ಮಕ್ಕಳನ್ನು ಕೊಂದ ಬಳಿಕ ತಾಯಿ ಪ್ರಿಯಾಂಕಾ (26) ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಆರು ವರ್ಷಗಳ ಹಿಂದೆ ಪ್ರಿಯಾಂಕಾ ಹಾಗೂ ಅನಿಲ್ ಕುಮಾರ್ ಎಂಬುವವರ ವಿವಾಹವಾಗಿತ್ತು. ಪ್ರಿಯಾಂಕಾ ತನ್ನಿಬ್ಬರು ಮಕ್ಕಳಿಗೆ ನೇಣು ಬಿಗಿದು ಕೊಲೆ ಮಾಡಿದ್ದಾಳೆ. ಆ ಬಳಿಕ ತಾನೂ ಸಹ ನೇಣಿಗೆ ಶರಣಾಗಲು ಯತ್ನಿಸಿದ್ದಾಳೆ. ಈ ವಿಷಯ ತಡವಾಗಿ ಅಕ್ಕಪಕ್ಕದ ನಿವಾಸಿಗಳ ಗಮನಕ್ಕೆ ಬಂದಿದ್ದು, ತಕ್ಷಣವೇ ಅವರು ಧಾವಿಸಿ ಪ್ರಿಯಾಂಕಾಳನ್ನು ರಕ್ಷಿಸಿದ್ದಾರೆ.

ಸದ್ಯ ಪ್ರಿಯಾಂಕಾಳ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಗೆ ನಿಖರವಾದ ಕಾರಣವೇನೆಂದು ಇನ್ನು ತಿಳಿದುಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಾಲಿಗ್ರಾಮ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Leave a Reply