Visitors have accessed this post 546 times.
ಉದ್ಯಮಿಯೋರ್ವರಿಗೆ ಸಿನಿಮಾ ಆಸೆ ತೋರಿಸಿ ಹನಿ ಟ್ರ್ಯಾಪ್ ಮಾಡಿ ಖೆಡ್ಡಾಕ್ಕೆ ಕೆಡವಿ 40 ಲಕ್ಷ ಪೀಕಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.ಹನಿ ಟ್ರ್ಯಾಪ್ ಮಾಡಿದ ಸುಂದರಿ ಅಂಡ್ ಗ್ಯಾಂಗ್ ವಿರುದ್ಧ ಎಫ್ ಐ ಆರ್ ದಾಖಲು ಮಾಡಿರುವ ಅಶೋಕ್ ನಗರ ಪೋಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸಿನಿಮಾ ಹೆಸರಲ್ಲಿ ಆ ಸುಂದರಿ ಉದ್ಯಮಿಗೆ ಸಿನಿಮಾ ಮಾಡೋಣ, ನಾನು ಅದೇ ಫೀಲ್ಡ್ ನಲ್ಲಿದ್ದೇನೆ ಅಂತ ಕಲರ್ ಕಲರ್ ಕತೆ ಕಟ್ಟಿ ಹನಿಗಾಳ ಬೀಸಿದ್ದಾಳೆ. ಸುರ ಸುಂದರಿ ಮಾತು ನಂಬಿದ ಉದ್ಯಮಿ ಕೂಡ ಆಕೆಯ ಸಂಗಮಾಡಿದ್ದಾನೆ. ಇದಾದ ಕೆಲ ದಿನಗಳನಂತರ ಡೈರೆಕ್ಟರ್ ಹಣ ಕಷ್ಟ ಇದೆ ಅಂತ ನಾಲ್ಕು ಲಕ್ಷ ಹಣ ಪಡೆದಿದ್ದಾಳೆ. ನಂತರ ಹಣ ವಾಪಸ್ ಕೇಳಿದ್ರೆ ತನ್ನ ರೂಮಿಗೆ ಕರೆಸಿಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಅದನ್ನ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾಳೆ. ಇಷ್ಟಕ್ಲೆ ಸುಮ್ಮನಾಗದ ಆ ಸುಂದರಿ ಇದೇ ವಿಡಿಯೋ ಇಟ್ಟುಕೊಂಡು ನಿರಂತರ ಬ್ಲಾಕ್ ಮೇಲ್ ಮಾಡಿ ಬ್ರಾಸ್ ಲೈಟ್,ಚೈನ್ ಅಂತೆಲ್ಲಾ ಸುಮಾರು ನಲವತ್ತು ಲಕ್ಷ ಹಣ ಪೀಕಿದ್ದಾಳಂತೆ. ಮತ್ತೂ ಸುಮ್ಮನಾಗದೆ ಕಾರು ಕೊಡಿಸು ಅಂತ ದುಂಬಾಲು ಬಿದ್ದಿದ್ಳಂತೆ. ಇದಕ್ಕೆ ಉದ್ಯಮಿ ಒಪ್ಪದಿದ್ದಾಗ ಆರೋಪಿ ಕಾವ್ಯ ತನ್ನ ಸ್ನೇಹಿತರಾದ ರವಿ ಮತ್ತು ದಿಲೀಪ್ ಎಂಬುವವರಿಂದ ಕರೆ ಮಾಡಿಸಿ ಹಣಕ್ಕೆ ಧಮ್ಕಿ ಹಾಕಿಸಿದ್ದಾಳಂತೆ. ಹಣ ಕೊಡದಿದ್ರೆ ವಿಡಿಯೋ ಗಳನ್ನ ಟಿವಿಗೆ ಕೊಡೋದಾಗಿ ಬ್ಲಾಕ್ ಮೇಲ್ ಮಾಡಿದ್ರಂತೆ. ಅಷ್ಟೇ ಅಲ್ಲದೆ ಹಣ ನೀಡದಿದ್ದಾಗ ಸೋಶಿಯಲ್ ಮೀಡಿಯಾದಲ್ಲಿ ದೂರುದಾರನ ಫೋಟೋ ಹಾಕಿ ಮಾನ ಹರಣ ಮಾಡ್ತೇನೆ ಅಂತ ಅವಾಜ್ ಹಾಕಿದ್ದಾಳೆ. ಇದೀಗ ಅಶೋಕನಗರ ಠಾಣೆಯಲ್ಲಿ ಕಾವ್ಯ, ದಿಲೀಪ್, ರವಿ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದ್ದು ಆರೋಪಿಗಳಿಗೆ ಪೋಲೀಸರು ಹುಡುಕಾಟ ನಡೆಸಿದ್ದಾರೆ.