November 8, 2025
WhatsApp Image 2024-09-22 at 8.58.49 AM
ಶಿವಮೊಗ್ಗ : ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಸಹಕಾರದರ್ಶಿಯಾದ ಶರಣ್ ಪಂಪ್ ವೆಲ್ ಅವರನ್ನು ಚಿತ್ರದುರ್ಗ ಪೊಲೀಸರು ಶಿವಮೊಗ್ಗದಲ್ಲಿ ಅಡ್ಡ ಹಾಕಿ ವಾಪಸ್ ಮಂಗಳೂರಿಗೆ ವಾಪಾಸ್ ಕಳುಹಿಸಿದ್ದಾರೆ.
ವಾಪಸ್ ಕಳುಹಿಸಿದ ಕ್ರಮವನ್ನ ಹಿಂದೂ ಸಂಘಟನೆಗಳು ತೀರ್ವವಾಗಿ ಖಂಡಿಸಿದ್ದಾರೆ.  ವಿಶ್ವ ಹಿಂದು ಪರಿಷತ್ ಬಜರಂಗದಳ ಶಿವಮೊಗ್ಗ ವಿಭಾಗ ಚಿತ್ರದುರ್ಗ ಖಾಕಿಯವರ ಕ್ರಮಕ್ಕೆ ಕೆಂಡಮಂಡಲಗೊಂಡಿದೆ.
ತನ್ನ ಪ್ರಾಣದ ಹಂಗು ತೊರೆದು ಹಿಂದೂ ಧರ್ಮದ ರಕ್ಷಣೆ ಕಾರ್ಯ ಮಾಡುತ್ತಿರುವ ಹಿಂದೂ ಕಾರ್ಯಕರ್ತರನ್ನ  ಪೊಲೀಸ್ ಇಲಾಖೆಯು ನಿಯಂತ್ರಿಸಲು ಹೊರಟಿದೆ. ಖಾಕಿ ದುರ್ವರ್ತನೆಯನ್ನು ಬಜರಂಗದಳ ತೀವ್ರವಾಗಿ ಖಂಡಿಸಿದೆ.
ಹಿಂದೂ ಕಾರ್ಯಕರ್ತರನ್ನು ತಡೆಯುವ ಬದಲು ದೇಶದ್ರೋಹಿ ಚಟುವಟಿಕೆ ಮಾಡುತ್ತಿರುವಂತಹ ದೇಶದ್ರೋಹಿಗಳನ್ನು ತಡೆಯಿರಿ ಇದನ್ನು ಬಿಟ್ಟು ಹಿಂದೂ ಕಾರ್ಯಕರ್ತರನ್ನು ತಡೆಯುವಂತಹ ಕೆಲಸ ಪೊಲೀಸ್ ಇಲಾಖೆ ಕೈಬಿಡಬೇಕೆಂದು ಆಗ್ರಹಿಸಿದೆ.
ಚಿತ್ರದುರ್ಗದ ಕಾರ್ಯಕ್ರಮನಿಮಿತ್ತ ಹೊರಟಿದ್ದಂತಹ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಸಹಕಾರದರ್ಶಿಯಾದ ಶರಣ್ ಪಂಪ್ ವೆಲ್ ಅವರನ್ನು ಶಿವಮೊಗ್ಗದಲ್ಲಿ ಅಡ್ಡ ಹಾಕಿ ಅವರನ್ನು ಚಿತ್ರದುರ್ಗಕ್ಕೆ ಹೋಗದಂತೆ ತಡೆಯಲಾಗಿದೆ.
ಶಿವಮೊಗ್ಗದ ಪುರಲೆ ಬಳಿ ಅಡ್ಡಹಾಕಿ ಅವರನ್ನ ಮಂಗಳೂರಿಗೆ ವಾಪಾಸ್ ಕಳುಹಿಸಲಾಗಿದೆ.  ಪೊಲೀಸರ ಈ ನಡೆಯನ್ನು ಬಜರಂಗದಳದ ಶಿವಮೊಗ್ಗ ವಿಭಾಗದ ಸಂಯೋಜಕ ರಾಜೇಶ್ ಗೌಡ  ತೀವ್ರವಾಗಿ ಖಂಡಿಸಿದ್ದಾರೆ.

About The Author

Leave a Reply