Visitors have accessed this post 558 times.
ಮಂಗಳೂರು:ರಾತ್ರಿ ಸುರಿದ ಮಳೆಗೆ ನಗರದ ಹೊರವಲಯ ಉಳ್ಳಾಲ ಟಿಸಿ ರೋಡ್ ಮುಳಿಗುಡ್ಡೆ ಎಂಬಲ್ಲಿ ಮನೆಯ ಅವರಣ ಗೋಡೆ ಮೇಲೆ ಮಣ್ಣು ಕುಸಿದು ಬಿದ್ದಿದ್ದು ಮನೆ ಮಂದಿ ಅತಂಕದಲ್ಲಿದ್ದಾರೆ. ಮನೆಯೊಂದು ಕುಸಿಯುವ ಭೀತಿ ಎದುರಾಗಿದೆ. ರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
(ಸೆ.23)ನಿನ್ನೆ ರಾತ್ರಿ ಮಂಗಳೂರು ಸೇರಿದಂತೆ ನಗರದ ಹೊರವಲಯದ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಸ್ಥಳಕ್ಕೆ ಉಳ್ಳಾಲ ಪುರಸಭೆ ಅಧಿಕಾರಿಗಳು ಭೇಟಿ ನೀಡಿದ್ದು ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯಚರಣೆ ನಡೆಯುತ್ತಿದೆ.