Visitors have accessed this post 198 times.
ಹೌದು! ಜಿಲ್ಲೆಯ ಪಂಚಾಯತ್ ರಾಜ್ ಸಂಘಟನೆಗೆ ಮರುಜೀವ ನೀಡುವುದರೊಂದಿಗೆ ಗ್ರಾ.ಪಂಚಾಯತ್ ಹಾಲಿ-ಮಾಜಿ ಸದಸ್ಯರಿಗೆ ಶಕ್ತಿಯಾಗಿ ಪರಿವರ್ತಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ.ಇದೀಗ ಉಭಯ ಜಿಲ್ಲೆಯ ಒಂದು ಸ್ಥಾನಕ್ಕೆ ನಡೆಯುವ ವಿಧಾನಪರಿಷತ್ ಚುನಾವಣೆ ಘೋಷನೆಯಾಗಿದ್ದು,ಸ್ಥಳೀಯಾಡಳಿತ ಮತ್ತು ಗ್ರಾ.ಪಂಚಾಯತ್ ಸದಸ್ಯರಿಗೆ ಮಾತ್ರ ಮತದಾನ ಮಾಡುವ ಅವಕಾಶವಿರುತ್ತದೆ.ಪಂಚಾಯತ್ ರಾಜ್ ಸಂಘಟನೆಯ ಮೂಲಕ ಪಂಚಾಯತ್ ರಾಜ್ ಪ್ರತಿನಿಧಿಗಳನ್ನು ಒಗ್ಗೂಡಿಸಿ ಪಕ್ಷಕ್ಕೆ ಮತಗಳಾಗಿ ಕ್ರೂಡೀಕರಿಸಲು ಇವರ ಪಾತ್ರ ಬಹುಮುಖ್ಯವಾಗಿದೆ.ಈ ಹಿಂದೆಯೂ ಸಂಘಟನೆಯ ಮೂಲಕ ಯಶ ಸಾದಿಸಿರುತ್ತಾರೆ.ಇವರ ಅನುಭವ ಸಂಘಟನಾ ಚಾತುರ್ಯವನ್ನು ಮೆಚ್ಚಿ ರಾಜ್ಯಮಟ್ಟದ ನಾಯಕರು ಕೂಡ ಅಭಿನಂದಿಸಿದ್ದಾರೆ.ಇವರು ಗ್ರಾ.ಪಂಚಾಯತಿಗೆ 6 ಬಾರಿ ಸದಸ್ಯರಾಗಿ ಆಯ್ಕೆಯಾಗಿ,ಎರಡು ಬಾರಿ ಅದ್ಯಕ್ಷರಾಗಿ,ಎರಡು ಬಾರಿ ಉಪಾಧ್ಯಕ್ಷರಾಗಿ ಅಗಾಧವಾದ ಅನುಭವ ಹೊಂದಿರುವ ಇವರು ಪಂಚಾಯತ್ ರಾಜ್ ನಿಯಮ,ಕಾನೂನುಗಳನ್ನು ಆಳವಾಗಿ ತಿಳಿದಿರುತ್ತಾರೆ.ಒಂದು ಗ್ರಾಮವನ್ನು ಅಭಿವೃದ್ಧಿ ಪಥದಲ್ಲಿ ಯಾವ ರೀತಿ ಕೊಂಡಯ್ಯಬಹುದು ಎಂಬುದಕ್ಕೆ ಇವರೇ ಒಂದು ಉದಾಹರಣೆ ಎಂದರೆ ತಪ್ಪಾಗಲಾರದು! ಕೊಳ್ನಾಡು ಗ್ರಾಮವನ್ನು ಮಾದರಿ ಗ್ರಾಮನ್ನಾಗಿ ಪರಿಪರ್ತಿಸಿ ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ, ನಮ್ಮ ಗ್ರಾಮ ನಮ್ಮ ಯೋಜನೆ ರಾಜ್ಯ ಪುರಸ್ಕಾರ, ನಿರ್ಮಲ ಗ್ರಾಮ ಪುರಸ್ಕಾರ ಸೇರಿದಂತೆ ಜಿಲ್ಲಾ ಪುರಸ್ಕಾರಗಳು ಅಲ್ಲದೇ ಹಲವಾರು ಪುರಸ್ಕಾರಗಳನ್ನು ಪಡೆದಿರುವುದು ಇವರ ಆಡಳಿತದ ಹೆಗ್ಗಳಿಕೆಯ ಗುರುತಾಗಿದೆ.ಕೊಳ್ನಾಡು ಗ್ರಾ.ಪಂಚಾಯತ್ ಇವರ ಪ್ರಥಮ ಆಡಳಿತ ಅವಧಿಯಲ್ಲಿ 2.5 ಲಕ್ಷವಿದ್ದ ಆದಾಯವನ್ನು 5 ವರ್ಷದ ಅವಧಿಯಾಗುವಾಗ 25 ಲಕ್ಷಕ್ಕೇರಿಸಿ,ತನ್ನ ದ್ವೀತಿಯ ಅವದಿಯಲ್ಲಿ 60 ಲಕ್ಷಕ್ಕೆ ಎರಿಸುವ ಮೂಲಕ ಅದ್ವಿತೀಯ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ.ಸಾಲೆತ್ತೂರು ನವಪೇಟೆ ನಿರ್ಮಾನ ಇವರ ಪ್ರಮುಖ ಸಾಧನೆಗಳಲ್ಲೊಂದು.ಅಲ್ಲದೆ ಇದು ಭವಿಷ್ಯದ ಆಡಳಿತಕ್ಕೆ ಕೋಟಿಗೂ ಮೀರಿ ಆದಾಯವಾಗುವುದರಲ್ಲಿ ಸಂಶಯವಿಲ್ಲ ಮತ್ತು ಆದಾಯಕ್ಕೆ ಭದ್ರ ಬುನಾದಿ ಒದಗಿಸಿರುವುದು ಮುಂದಿನ ಪೀಳಿಗೆಗೆ ಸಹಕಾರಿಯಾಗಿರುತ್ತದೆ ಹಾಗೂ ಗ್ರಾಮದ ಅಭಿವೃದ್ಧಿಗೆ ಪೂರಕವಾಗಲಿದೆ.ಚುನಾವಣಾ ಸಂಧರ್ಬಗಳಲ್ಲಿ ಪಕ್ಷದ ನಾಯಕರು ಇವರ ರಾಜಕೀಯ ಚಾಣಕ್ಯತೆಯನ್ನು ಗುರುತಿಸಿ ಜಿಲ್ಲಾ ಮಟ್ಟದ,ವಿಟ್ಲ ಉಪ್ಪಿನಂಗಡಿ,ಪುತ್ತೂರು,ಬಂಟ್ವಾಳವಿಧಾನ ಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ನೇಮಿಸದಾಗಲೆಲ್ಲಾ ಮತಕ್ರೂಡಿಕರ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.ಜಿಲ್ಲೆಯಲ್ಲಿ ಇವರ ಸಂಘಟನಾ ಸಾಮರ್ಥ್ಯವನ್ನು ಗುರುತಿಸಿದರೂ ಕೂಡ ಬಂಟ್ವಾಳ ಕ್ಷೇತ್ರದಲ್ಲಿ ಇವರ ಸಂಘಟನಾ ಶಕ್ತಿಯನ್ನು ಬಳಸಿಕೊಂಡದ್ದು ಕಡಿಮೆ!ಬ್ಲಾಕ್ ಅದ್ಯಕ್ಷರಾಗಲೂ,ಆರ್ಹತೆ, ಅವಕಾಶ,ಜನಬೆಂಬಲವಿದ್ದರೂ ಅವಕಾಶ ನೀಡಲಾಗಲಿಲ್ಲ. ಕೊಳ್ನಾಡು ಜಿ.ಪಂಚಾಯತ್ ವ್ಯಾಪ್ತಿಯಲ್ಲಿ ಮಾಜಿ ಸಚಿವರಾದ ರಮನಾಥ ರೈಯವರ ಪ್ರತಿ ಚುನಾವಣೆಯಲ್ಲಿ 3700 ಬಹುಮತ ಬರಲು ಅತೀಹೆಚ್ಚು ಲೀಡ್ ಕೊಡಿಸುವ ಮೂಲಕ ತಮ್ಮ ಸಂಘಟನಾ ಚಾಕಚಕ್ಯತೆಯ ಪ್ರಬಾವದ ಮೂಲಕ ತನ್ನ ಹಿಡಿತವನ್ನು ತೋರಿಸಿದ್ದಾರೆ.ಇವರನ್ನು ಹೆಚ್ಚಾಗಿ ಬಳಸಿಕೊಂಡಿದ್ದಲ್ಲಿ ರಮನಾಥ ರೈಗಳ ಗೆಲುವು ಕಟ್ಟಿಟ್ಟ ಬುತ್ತಿ ಎಂಬುದು ಕಾರ್ಯಕರ್ತರ ವಾದವಾಗಿದೆ.ಅನಿವಾರ್ಯ ಸಂಧರ್ಭದಲ್ಲು ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿರುತ್ತಾರೆ. ಇವರು ಪಂಚಾಯತ್ ರಾಜ್ ಸಂಘಟನೆಯ ಅದ್ಯಕ್ಷರಾಗಿ ಆಯ್ಕೆಯಾದ ನಂತರ ತೆರೆಮರೆಯಲ್ಲಿದ್ದ ಸಂಘಟನೆಗೆ ಮರಜೀವ ಒದಗಿಸಿ,ಸುಳ್ಯದ ಸಂಪಾಜೆಯಿಂದ-ಶಿರಾಡಿ-ಮುಲ್ಕಿಯವರೆಗೆ ಪ್ರತಿ ಬ್ಲಾಕ್, ಜಿ.ಪಂಚಾಯತ್ ವ್ಯಾಪ್ತಿ,ವಲಯ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಮಂಗಳೂರನ್ನು ಕೇಂದ್ರವಾಗಿರಿಸಿ ಪಂಚಾಯತ್ ರಾಜ್ ಸಮಾವೇಶ ಹಮ್ಮಿಕೊಳ್ಳುವುದರ ಮೂಲಕ ದ.ಕನ್ನಡದಲ್ಲಿ ಸಂಘಟನೆಯ ಇರುವಿಕೆಯನ್ನು ತೋರಿಸಿ ರಾಜ್ಯದಲ್ಲೆ ಗುರುತಿಸುವಂತೆ ಮಾಡಿದ್ದಾರೆ.ಪಂಚಾಯತ್ ರಾಜ್ ಪ್ರತಿಷ್ಠಾನದ ಮೂಲಕ ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು,ಸಿಬ್ಬಂದಿಗಳ “ಹೊಂಬೆಳಕು” ಕ್ರೀಡಾಕೂಟ ನಡೆಸಿ ಉಭಯ ಜಿಲ್ಲೆಯಲ್ಲೆ ಪಕ್ಷದ ವತಿಯಿಂದ ಪ್ರಥಮ ಭಾರಿಗೆ ನಡೆಸಿದ ಖ್ಯಾತಿಯೊಂದಿಗೆ ಮೆಚ್ಚುಗೆಗೆ ಪಾತ್ರವಾಯಿತು. ಇದೆಲ್ಲವೂ ಪಕ್ಷಕ್ಕೆ ಬಹಳ ಪ್ರಯೋಜನಕಾರಿಯಾಗಿದೆ ಎಂಬುದರಲ್ಲಿ ಸಂಶಯವಿಲ್ಲ.ರಾಜಕಾರಣದಲ್ಲಿ ಅಕ್ರಮ ವ್ಯವಹಾರ,ವರ್ಗಾವಣೆ ದಂದೆ,ಸ್ವಾರ್ಥಕ್ಕಾಗಿ ಹೊಂದಾಣಿಕೆ ರಾಜಕೀಯ ಮಾಡದೆ ವಿರೋಧ ಪಕ್ಷದವರನ್ನು ನೇರವಾಗಿ ಎದುರಿಸಿ ಜಿಲ್ಲೆಯ ಎಲ್ಲಾ ಪಂಚಾಯತ್ ಪ್ರತಿನಿಧಿಗಳ ಪರಿಚಯ ಹೊಂದಿರುವ ಮತ್ತು ಜನಪ್ರತಿನಿಧಿಗಳ ಅಷೋತ್ತರಗಳಿಗೆ ಸ್ಪಂದಿಸುವ ಏಕೈಕ ಎರಡನೇ ಹಂತದ ನಾಯಕ ಕುಳಾಲು ಸುಭಾಶ್ಚಂದ್ರ ಶೆಟ್ಟಿ. ಇಂತಹ ಪಕ್ಷ ಸಂಘಟನಾ ವ್ಯಕ್ತಿಗಳನ್ನು ಪಕ್ಷದ ಹೈಕಮಾಂಡ್,ನಾಯಕರುಗಳು ಗುರುತಿಸಿ ಸೂಕ್ತ ಸ್ಥಾನಮಾನವನ್ನು ನೀಡಬೇಕಾದ ಅನಿವಾರ್ಯವಿದೆ.ಇದೀಗ ಸ್ಥಳೀಯಾಡಳಿತದಿಂದ ವಿಧಾನ ಪರಿಷತ್ ಗೆ ಚುನಾವಣೆ ನಡೆಯಲಿದ್ದು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವಿಧಾನ ಪರಿಷತ್ ಗೆ ಆಯ್ಕೆಯಾಗಬೇಕಾದ ಸೂಕ್ತ ವ್ಯಕ್ತಿ ಶ್ರೀ ಕುಳಾಲ್ ಸುಭಾಶ್ಚಂದ್ರ ಶೆಟ್ಟಿ ಎಂದು ಕಾರ್ಯಕರ್ತರ ಒಕ್ಕೊರಲ ಅಭಿಪ್ರಾಯವಾಗಿದೆ.
ಆದರೆ ಈ ಬಗ್ಗೆ ಅವರಲ್ಲಿ ನೇರವಾಗಿ ಕಾರ್ಯಕರ್ತರು,ನಾಯಕರುಗಳು ಪ್ರಶ್ನಿಸಿದಾಗ ನಾನು ನನ್ನ ಇತಿಮಿತಿಯನ್ನು ಅರ್ಥಮಾಡಿಕೊಂಡಿದ್ದೇನೆ.ನಾನು ಹಂತಹಂತವಾಗಿ ಬೆಳೆಯಲು ಇಚ್ಚಿಸುತ್ತೇನೆ ಹೊರತು ಏಕಾಏಕಿ ವಿಧಾನ ಸಭೆ,ಪರಿಷತಿಗೆ ಆಯ್ಕೆಯಾಗುವ ನೀರಿಕ್ಷೆ ಇಟ್ಟುಕೊಂಡಿಲ್ಲ!ರಾಜಕೀಯದಲ್ಲಿ ಅತೀಯಾದ ಮಹತ್ವಾಕಾಂಕ್ಷೆ ಹೊಂದಿದವನಲ್ಲ,ನಾನು ಆಶಾವಾದಿ ಅವಕಾಶವಾದಿಯಲ್ಲ ಎಂದು ಪ್ರತಿಕ್ರಿಯೆಯಿಸಿದರು.ಪಕ್ಷ,ನಾಯಕರು ಯಾವುದೇ ಹುದ್ದೆ, ಜವಾಬ್ದಾರಿ ಕೊಟ್ಟರು ನಿಭಾಯಿಸಲು ಸಿದ್ದನಿದ್ದೇನೆ ಎಂದು ತಿಳಿಸಿದರು.