August 30, 2025
WhatsApp Image 2024-10-01 at 7.25.28 PM

ಮುಂಬರುವ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಪಂಚಾಯತ್ ರಾಜ್ ಸಂಘಟನೆಗೆ ಮಹತ್ತರವಾದ ಜವಾಬ್ದಾರಿ ಇದೆ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಮತದಾರ ರಾಗಿರುವುದರಿಂದ ಅಭ್ಯರ್ಥಿ ಗಳು ಯಾರೇ ಆಗಿರಲಿ ನಾವು ಈಗಿಂದಲೇ ಮತ ಕ್ರೋಡೀಕರಣಕ್ಕೆ ಮುಂದಾಗಿ ಪಕ್ಷದ ಅಭ್ಯರ್ಥಿ ಯ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.

ಅವರು ಇಂದು ದ. ಕ ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ನಡೆದ ಪಂಚಾಯತ್ ರಾಜ್ ಸಂಘಟನೆ ಯ ಜಿಲ್ಲಾ ಪದಾಧಿಕಾರಿಗಳಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪಂಚಾಯತ್ ರಾಜ್ ಕಾರ್ಯಪಡೆ ರಚನೆಗಾಗಿ ಈಗಾಗಲೇ ಜಿಲ್ಲೆಯ ಗ್ರಾಮ ಭೇಟಿ ಮಾಡಿ ನಮೂನೆ ಪ್ರತಿ ಹಂಚಲಾಗಿದೆ, ಪ್ರತಿ ಗ್ರಾಮದಲ್ಲಿ ಕನಿಷ್ಠ 25 ಜನರ ಜಿ. ಪ, ತಾ. ಪಂ ಹಾಗೂ ಗ್ರಾಮ ಪಂಚಾಯತ್ಗಳಲ್ಲಿ ಸದಸ್ಯರ, ಮಾಜಿ ಸದಸ್ಯರ ಮತ್ತು ಪರಾಜಿತ ಅಭ್ಯರ್ಥಿ ಗಳ ತಂಡ ರಚನೆ ಮಾಡಿ ಗ್ರಾಮ ಮಟ್ಟದಲ್ಲಿ ಸಂಘಟಿತರಾಗಬೇಕು, ಈ ಸದಸ್ಯರಿಗೆ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಕಾರ್ಯಾಗಾರ ಆಯೋಜಿಸಿ ಮುಂದಿನ ಜಿ. ಪಂ, ತಾ. ಪಂ ಮತ್ತು ಗ್ರಾಮ ಪಂಚಾಯತ್ ಚುನಾವಣೆಗೆ ಕಾರ್ಯೋಣ್ಮುಖರಾಗಲು ಮಾಹಿತಿ, ತರಬೇತಿ ನೀಡಲಾಗುವುದು ಎಂದು ತಿಳಿಸಿದರು, ವಿಧಾನ ಪರಿಷತ್ ಸದಸ್ಯರು ಪಂಚಾಯತ್ ಗಳಿಗೆ ಅನುದಾನ ಹಂಚುವಾಗ ನಮ್ಮ ಸಂಘಟನೆಗೆ ಆದ್ಯತೆ ನೀಡಿರುವುದಕ್ಕೆ ಅಭಿನಂದಿಸಲಾಯ್ತು ಮತ್ತು ಜಿಲ್ಲೆಯಲ್ಲಿ ನಮ್ಮ ಶಾಸಕರು ಕಡಿಮೆ ಇರುವುದರಿಂದ ವಿಶೇಷ ಅನುದಾನ ತರುವಂತೆ ಶ್ರೀ ಮಂಜುನಾಥ್ ಭಂಡಾರಿ ಯವರಿಗೆ ಮನವಿ ಮಾಡಲು ನಿರ್ಣಯಿಸಲಾಯ್ತು. ಮುಂದಿನ ಜನವರಿ ಯಲ್ಲಿ ನಡೆಯುವ ಹೊಂಬೆಳಕು ಕಾರ್ಯಕ್ರಮ ಕ್ಕೆ ಸಂಪೂರ್ಣ ಸಹಕರಿಸಿ ಯಶಸ್ವಿ ಗೊಳಿಸಲು ಮನವಿ ಮಾಡಲಾಯ್ತು.ವಿಧಾನ ಪರಿಷತ್ತಿಗೆ ಅಭ್ಯರ್ಥಿ ನಿರ್ಣಯವಾದಗ ಸುಭಾಶ್ಚಂದ್ರ ಶೆಟ್ಟಿಯವರ ಹೆಸರನ್ನು ಸಭೆಯಲ್ಲಿ ಸೇರಿದ ಪಧಾದಿಕಾರಿಗಳು ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದರ,ಆದರೆ ಅದ್ಯಕ್ಷರು ನಯವಾಗಿ ತಿರಸ್ಕರಿಸಿದರು.

ವೇದಿಕೆ ಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶುಭೋದಯ ಆಳ್ವ, ವೃಂದಾ ಪೂಜಾರಿ, ಹೈದರ್ ಕೈರಂಗಳ, ರಾಜಶೇಖರ್ ರೈ ಬೆಳ್ತಂಗಡಿ, ಲೀಲಾ ಮನ್ಮೋಹನ್ ಸುಳ್ಯ ಉಪಸ್ಥಿತರಿದ್ದರು

About The Author

Leave a Reply