January 16, 2026
WhatsApp Image 2024-10-03 at 9.37.26 AM

ಕಾಸರಗೋಡು : ಕುಂಬಳೆ ಪೆರುವಾಡ್  ತೀರದಲ್ಲಿ ಮೀನು ಹಿಡಿಯುತ್ತಿದಾಗ ನೀರುಪಾಲಾಗಿದ್ದ ಯುವಕನ ಮೃತದೇಹ ಬುಧವಾರ ಮಧ್ಯಾಹ್ನ ಕುಂಬಳೆ ಆರಿಕ್ಕಾಡಿ  ತೀರದಲ್ಲಿ ಪತ್ತೆಯಾಗಿದೆ.

ಪೆರುವಾಡ್ ಕಡಪ್ಪುರ ಪಿಷರೀಸ್ ಕಾಲನಿಯ  ಅರ್ಷಾದ್ (19) ಮೃತಪಟ್ಟವನು. ಮಂಗಳ ವಾರ ಸಂಜೆ  ತೀರದಲ್ಲಿ ಬಲೆ ಬೀಸಿ ಮೀನು ಹಿಡಿಯುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರಪಾಲಾಗಿದ್ದನು. ನಾಗರಿಕರು , ಪೊಲೀಸರು , ಅಗ್ನಿಶಾಮಕ ದಳದ ಸಿಬಂದಿಗಳು ಶೋಧ ನಡೆಸಿದ್ದರು.ಈ ನಡುವೆ ಆರಿಕ್ಕಾಡಿ ತೀರದಲ್ಲಿ  ಮೀನುಗಾರರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕಾಗಮಿಸಿದ ಕುಂಬಳೆ ಪೊಲೀಸರು ಮಹಜರು ನಡೆಸಿ , ಕಾಸರಗೋಡು ಜನರಲ್ ಆಸ್ಪತ್ರೆ ಗೆ ಸಾಗಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಸಂಜೆ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು

About The Author

Leave a Reply