October 23, 2025
333

ಮಂಗಳೂರು : ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಸಹೋದರ, ಉದ್ಯಮಿ ಮುಮ್ತಾಝ್ ಅಲಿ ಸಾವಿಗೆ ವಿಧಾನ ಸಭಾಪತಿ ಯು ಟಿ. ಖಾದರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ  ಹೇಳಿಕೆ ಬಿಡುಗಡೆ ಮಾಡಿರುವ ಅವರು  ಆತ್ಮೀಯರಾಗಿದ್ದ ಮುಮ್ತಾಝ್ ಅಲಿ ಕೃಷ್ಣಾಪುರ ಅವರ ಅನಿರೀಕ್ಷಿತ ನಿಧನವು ದಿಗ್ಭ್ರಮೆ ಮತ್ತು ದುಖ ನೋವು ತಂದಿದೆ. ಸಮಾಜಕ್ಕೆ ಮತ್ತು ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದದ, ಸಾಮರಸ್ಯದ ಕೊಂಡಿಯೊಂದು ಕಳಚಿದಂತಾಗಿದೆ. ಹಲವಾರು ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳ ನೇತೃತ್ವ ಅನಾಥವಾಗಿದೆ. ಸಮಾಜಕ್ಕೆ ಅವರ ಕೊಡುಗೆಯು ಅನನ್ಯವಾದುದು. ಅವರ ನಿಧನದ ಸುದ್ದಿ ಸಹಿಸಲಾರದಷ್ಟು ದುಖ ತಂದಿದೆ. ಅವರನ್ನು ಬೆದರಿಸಿ ಬ್ಲಾಕ್ ಮೇಲ್ ಮಾಡಿದ್ದಾರೆಂದು ಕುಟುಂಬಿಕರು ಆರೋಪಿಸಿದ್ದು, ಅವರು ಯಾರೇ ಆಗಿರಲಿ ಅವರ ಮೇಲೆ ಕಠಿಣ ಕ್ರಮ ಜಾರಿಯಾಗಬೇಕು. ಮೃತರ ಕುಟುಂಬಿಕರು, ಸ್ನೇಹಿತರಿಗೆ ದುಖ ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ನೀಡಲಿ. ಮೃತರಿಗೆ ಮಗ್ಫಿರತ್ ಮತ್ತು ಮರ್ಹಮತ್ ದಯಪಾಲಿಸಲಿ ಎಂದು ಜರ್ಮನಿ ಪ್ರವಾಸದಲ್ಲಿರುವ ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ತಿಳಿಸಿದ್ದಾರೆ.

About The Author

Leave a Reply