ಮಂಗಳೂರು : ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸೋದರ ಮುಮ್ತಾಜ್ ಅಲಿ ಮೃತದೇಹ ಪತ್ತೆಯಾಗಿದೆ. 28 ಗಂಟೆಗಳ ಕಾರ್ಯಾಚರಣೆ ಬಳಿಕ ಕೂಳೂರಿನ ಸೇತುವೆ ಬಳಿ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ. ಇನ್ನು ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಒಬ್ಬಳು ಮುಮ್ತಾಜ್ ಅಲಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದ್ದು, ಈ ಒಂದು ಬ್ಲಾಕ್ ಮೇಲ್ ಗೆ ಮಹಿಳೆಯ ಪತಿ ಕೂಡ ಸಾತ್ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಹೌದು ಮಹಿಳೆ ಬ್ಲ್ಯಾಕ್ಮೇಲ್ ಗೆ ಆಕೆ ಪತಿಯೇ ಸಾತ್ ನೀಡಿದ್ದ ಎನ್ನಲಾಗುತ್ತಿದೆ. ರಹಮತ್ ಅಲಿಯಾಸ್ ಆಯೇಷಾ ಎಂಬ ಮಹಿಳೆಯಿಂದ ಬ್ಲಾಕ್ ಮೇಲ್ ಮಾಡಲಾಗಿತ್ತು. ಇದಕ್ಕೆ ಆಕೆಯ ಪತಿ ಕೂಡ ಬ್ಲಾಕ್ ಮೇಲ್ ಮಾಡಲು ಸಹಕರಿಸಿದ್ದಾನೆ. ಮುಮ್ತಾಜ್ ಅಲಿ ಆತ್ಮಹತ್ಯೆ ಕೇಸ್ ರೆಹಮತ್ ಅಲಿಯಾಸ್ ಆಯೇಷಾ ಎಂಬ ಮಹಿಳೆಯಿಂದ ಅಲಿಗೆ ಬ್ಲಾಕ್ ಮೇಲ್ ಮಾಡಲಾಗುತ್ತಿತ್ತು.
ಆರೋಪಿ ಮಹಿಳೆ ರೆಹಮತ್ ಅಲಿಯಾಸ್ ಆಯೇಷ ಎನ್ನುವ ಮಹಿಳೆ ಮುಮ್ತಾಜ್ ಅಲಿಯನ್ನು ಹನಿ ಟ್ರಾಪ್ ನಲ್ಲಿ ಸಿಲುಕಿಸಿದ್ದಲ್ಲದೆ ಹಣಕ್ಕೆ ಬೇಡಿಕೆ ಇಟ್ಟಿದ್ದಳು.ತನ್ನನ್ನು ಮದುವೆ ಆಗು ಎಂದು ಕಿರುಕುಳ ನೀಡುತ್ತಿದ್ದಳಂತೆ. ಈ ಹಿನ್ನೆಲೆಯಲ್ಲಿ ಮುಮ್ತಾಜ್ ಅಲಿ ಕಳೆದ ಮೂರು ತಿಂಗಳಿನಿಂದ ಮಹಿಳೆಯಿಂದ ಕಿರುಕುಳಕ್ಕೆ ಒಳಗಾಗಿದ್ದರು. ಹಾಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಆಯಿಷಾ ಪತಿ ಸಹ ಪತ್ನಿಯ ಬ್ಲಾಕ್ ಮೇಲ್ ಗೆ ಸಾತ್ ನೀಡಿದ್ದ ಪ್ರಕರಣದಲ್ಲಿ ಆಯೇಷಾ ಪತಿ ಶೋಯೆಬ್ ಎಂಬಾತ A5 ಆರೋಪಿ ಆಗಿದ್ದಾನೆ. ಆಯೇಷಾಳ ಮಗುವಿನ ಜೊತೆಗೆ ಮುಮ್ತಾಜ್ ಅಲಿ ಆಟ ಆಡುತ್ತಿರುವ ವಿಡಿಯೋವನ್ನು ಆಯೇಷಾ ವಾಟ್ಸಪ್ ಸ್ಟೇಟಸ್ ಹಾಕಿದ್ದಳು. ಇದರಿಂದ ಮಮ್ತಾಜ್ ಅಲಿ ಮನೆಯಲ್ಲಿ ರಾತ್ರಿಯವರೆಗೂ ಗಲಾಟೆ ನಡೆದಿತ್ತು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿಕೆ ನೀಡಿದರು.