August 30, 2025
WhatsApp Image 2024-10-08 at 10.17.03 AM

ವಿಟ್ಲ ಸಮೀಪದ ಕಳೆಂಜಿಮಲೆ ರಕ್ಷಿತಾರಣ್ಯದಿಂದ ಹಾಲುಮಡ್ಡಿ ಸಂಗ್ರಹಿಸಿ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ವಸ್ತು ಸಹಿತ ಅರಣ್ಯ ಇಲಾಖೆ ಅಧಿಕಾರಿಗಳು ಚಂದಳಿಕೆಯಲ್ಲಿ ಬಂಧಿಸಿದ್ದಾರೆ.

ಕೆದಿಲ ನಿವಾಸಿಗಳಾದ ಅಲಿ ಹೈದರ್, ಉಮ್ಮರ್ ಫಾರೂಕ್, ಮಹಮ್ಮದ್ ಹಸೈನಾರ್, ಉಮ್ಮರ್ ಫಾರೂಕ್ ಬಂಧಿತರು.

ನಾಲ್ವರು ಆರೋಪಿಗಳು ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಕೃತ್ಯ ನಡೆಸುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ 11 ಕೆ.ಜಿ. ಹಾಲುಮಡ್ಡಿ, ಮೇಣ ತೆಗೆಯಲು ಬಳಸಿದ ಸಲಕರಣೆ, ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ.

ವಲಯ ಅರಣ್ಯಾಧಿಕಾರಿ ಕಿರಣ್ ನೇತೃತ್ವದಲ್ಲಿ ಉಪ ವಲಯಾರಣ್ಯಾಧಿಕಾರಿ ವೀರಣ್ಣ, ಪ್ರಕಾಶ್ ಬಿ.ಟಿ., ಗಿರೀಶ್ ಎಚ್.ಪಿ., ಗಸ್ತು ಅರಣ್ಯಪಾಲಕ ಸತೀಶ್ ಡಿ’ಸೋಜಾ, ಚಾಲಕರಾದ ರಾಜೇಶ್, ತೇಜಪ್ರಕಾಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

About The Author

Leave a Reply