ಬ್ಲೂಫಿಲ್ಮ್ ತೋರಿಸಿ ನಿತ್ಯವೂ ಚಿತ್ರಹಿಂಸೆ ನೀಡುತ್ತಿದ್ದ ಗಂಡನನ್ನು ತನ್ನ ಮಗನ ಜೊತೆಗೆ ಸೇರಿ ಪತ್ನಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, 40 ವರ್ಷದ ಮುನಿರತ್ನ ನಿತ್ಯ ಕುಡಿದು ಬಂದು, ಪತ್ನಿಗೆ ಬ್ಲೂ ಫಿಲ್ಮ್ ತೋರಿಸಿ ಚಿತ್ರಹಿಂಸೆ ನೀಡುತ್ತಿದ್ದ.
ನಿನ್ನೆ ರಾತ್ರಿಯೂ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡಿದ್ದಾನೆ. ಈ ವೇಳೆ ಪತ್ನಿ ಮಗನ ಜೊತೆಗೆ ಸೇರಿಕೊಂಡು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪತ್ನಿ ಗೀತಾ ಹಾಗೂ 17 ವರ್ಷದ ಮಗನನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ.