Visitors have accessed this post 4 times.

ಉಪ್ಪಿನಂಗಡಿ : ಪೆದಮಲೆ ಪರಿಸರದಲ್ಲಿ ಹೆಚ್ಚಾಗುತ್ತಿದೆ ಕಳ್ಳರ ಕಾಟ, ಗಾಂಜಾ ಗ್ಯಾಂಗ್, ಕೃತ್ಯ ಶಂಕೆ -ಸ್ಥಳೀಯರಿಂದ ದೂರು ದಾಖಲು

Visitors have accessed this post 4 times.

ಉಪ್ಪಿನಂಗಡಿ: ಇಲ್ಲಿನ ಠಾಣಾ ವ್ಯಾಪ್ತಿಯ ಹಲವೆಡೆ ಕಳ್ಳತನ ಪ್ರಕಕರಣಗಳು ನಡೆದಿವೆ,ಅದರಲ್ಲೂ ಇತ್ತಿಚೇಗೆ ಮುಖ್ಯ ಪೇಟೆಯ  ಅಲ್ಲಲ್ಲಿ ಕಳ್ಳತನ ಆಗಿರುವ ಘಟನೆ ನಡೆದಿತ್ತು.

ಇದೀಗ ಇಳಂತಿಲ ಗ್ರಾಮದಲ್ಲೂ ರಾತ್ರಿ ವೇಳೆ ಅಪರಿಚಿತರ ಓಡಾಟ ಆರಂಭವಾಗಿದ್ದು ಅಲ್ಲಿನ ನಿವಾಸಿಗಳು ಠಾಣೆಗೆ ದೂರು ನೀಡಿದ್ದಾರೆ.

ಇಳಂತಿಲ ಗ್ರಾಮದ ಪೆದಮಲೆ ಭಾಗದಲ್ಲಿ ಇತ್ತೀಚೆಗೆ ಮಧ್ಯ ರಾತ್ರಿ  ಮನೆಯೊಂದರ ಮಹಡಿಯ ಮೇಲೆ ಅಪರಿಚಿತರ ಚಹರೆ ಪತ್ತೆಯಾಗಿತ್ತು. ಸ್ಥಳೀಯರು ಬಂದೊಡನೆ  ಪರಾರಿಯಾಗಿದ್ದರು.ಕೆಲ ಹೊತ್ತಿನ ಬಳಿಕ  ಜೋಗಿಬೊಟ್ಟು ರಸ್ತೆಯತ್ತ ದ್ವಿಚ್ಕ್ರ ವಾಹನದಲ್ಲಿ ಪ್ರಯಾಣಿಸುವುದು ಕಂಡು ಬಂದಿದೆ. ಗಾಂಜಾ ಗ್ಯಾಂಗ್, ಕೃತ್ಯ ಶಂಕೆ  ವ್ಯಕ್ತವಾಗಿದೆ ಇದರಿಂದ  ಆ ಭಾಗದ ಜನರು ರಾತ್ರಿ ಸಮಯದಲ್ಲಿ ಆತಂಕದಲ್ಲೇ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು  ಮಹಮದ್ ಸಾನಿದ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.  ದೂರು ಸ್ವೀಕರಿಸುವ ಪೊಲೀಸರು ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ.

ಉಪ್ಪಿನಂಗಡಿ ಪೊಲೀಸರು ಈಗಾಗಲೇ ಗಸ್ತು ತಿರುಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ, ಕೆಲ ತಿಂಗಳ ಹಿಂದೆ  ಗಾಂಜಾ ಸೇರಿದಂತೆ ಅಮಲು ಪದಾರ್ಥ ಸೇವಿಸಿದವರನ್ನು ವಶಕ್ಕೆ ಪಡೆದು ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು.

ಉಪ್ಪಿನಂಗಡಿಯು  ಪುತ್ತೂರು, ಬೆಳ್ತಂಗಡಿ, ಕಡಬ ಸೇರಿದಂತೆ ಪ್ರಮುಖ ತಾಲೂಕು ಕೇಂದ್ರಗಳನ್ನು ಸಂಪರ್ಕಿಸುವ ಪ್ರಮುಖ ಕೇಂದ್ರವಾಗಿದೆ. ಹೆದ್ದಾರಿಯೂ ಹಾದು ಹೋಗುವುದರಿಂದ  ಅನುಮಾನಸ್ಪದ ವ್ಯಕ್ತಿಗಳು ಪರಾರಿಯಾಗಲು ಸುಲಭ ದಾರಿಯೂ ಆಗಿದೆ. ಆದರೂ  ಪೊಲೀಸರು ಎಲ್ಲಾ ಕಡೆ ಹದ್ದಿನ ಕಣ್ಣಿಟ್ಟಿದ್ದಾರೆ.

Leave a Reply

Your email address will not be published. Required fields are marked *