August 30, 2025
WhatsApp Image 2024-10-27 at 9.49.12 AM

ಮಂಜೇಶ್ವರ: ಇಲ್ಲಿನ ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನ ಪ್ರಥಮ ಪದವಿ ತರಗತಿ ವಿದ್ಯಾರ್ಥಿನಿ ಮುಗು ರೋಡಿನ ಮುಹಮ್ಮದ್ – ಪೌಸಿಯ ದಂಪತಿಗಳ ಪ್ರತ್ರಿ ತ್ವಯಿಬಾ (18) ಅಸೌಖ್ಯದಿಂದ ಮೃತಪಟ್ಟ ಘಟನೆ ಇಂದು ನಡೆದಿದೆ. ಗೋವಿಂದ ಪೈ ಸರಕಾರಿ ಕಾಲೇಜಿನ ಪ್ರಥಮ ವರ್ಷ ಬಿಟಿಟಿಎಂ ವಿದ್ಯಾರ್ಥಿನಿಯಾದ್ದಳು. ಕಳೆದ ಹಲವು ದಿನಗಳಿಂದ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಇಂದು ರಾತ್ರಿ ಮೃತಪಟ್ಟಿದ್ದು, ವಿದ್ಯಾರ್ಥಿನಿಯ ಆಕಾಲಿಕ ಮರಣಕ್ಕೆ ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನ ಪ್ರಾಚಾರ್ಯರಾದ ಮುಹಮ್ಮದ್ ಅಲಿ ಪೆರ್ಲ, ಸಿನಿಯರ್ ಸುಪ್ರಡೆಂಟ್ ದಿನೇಶ್ ಕಾಲೇಜಿನ HOD, ಉಪನ್ಯಾಸಕರು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಗಾಢವಾದ ಸಂತಾಪವನ್ನು ಸೂಚಿಸಿದ್ದಾರೆ. ಅಕಾಲಿಕ ಮರಣ ಕಾಲೇಜು ನೌಕರರು ಹಾಗೂ ವಿದ್ಯಾರ್ಥಿಗಳನ್ನು ಹಾಗೂ ಮುಗು ಪ್ರದೇಶವಾಸಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

About The Author

Leave a Reply