August 30, 2025
WhatsApp Image 2024-06-26 at 10.04.25 AM

ಮಂಗಳೂರು: ಪ್ರವಾಸಿಗರನ್ನು ಕರೆದುಕೊಂಡು ನಗರಕ್ಕೆ ಆಗಮಿಸಿದ್ದ ಮಿನಿ ಬನ್ನೊಂದು ನಂತೂರು ಬಳಿ ಪಲ್ಟಿಯಾದ ಪರಿಣಾಮ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಅ.26ರಂದು ಬೆಂಗಳೂರಿನಿಂದ ಆಗಮಿಸಿದ ಪ್ರವಾಸಿಗರ ತಂಡ ಕುತ್ತಾರು ಕೊರಗಜ್ಜನ ಗುಡಿಗೆ ತೆರಳಿತ್ತು. ಅಲ್ಲಿಂದ ಧರ್ಮಸ್ಥಳಕ್ಕೆ ಹೊರಟು ಸಂಜೆ ನಂತೂರು ಸಂದೇಶ ಕ್ರಾಸ್ ಬಳಿ ಬರುತ್ತಿದ್ದ ಸಂದರ್ಭ ಎದುರಿನಲ್ಲಿದ್ದ ಬೈಕ್ ಸವಾರ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ದಿಬ್ಬವೊಂದರ ಮೇಲೆ ಚಲಿಸಿದೆ ಎನ್ನಲಾಗಿದೆ.

ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಮತ್ತು 10ಮಂದಿಗೆ ಅಲ್ಪಸ್ವಲ್ಪ ಗಾಯವಾ ಗಿದೆ. ಎಲ್ಲರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಕಾರೊಂದಕ್ಕೂ ಹಾನಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

About The Author

Leave a Reply