ಉಡುಪಿ: ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ- ಸೊತ್ತು ಸಹಿತ ಆರೋಪಿ ಪೊಲೀಸ್‌‌ ವಶ..!

ಉಡುಪಿ: ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ ಘಟನೆ ಮಣಿಪಾಲ ಪೆರಂಪಳ್ಳಿಯ ಸಾಯಿರಾಧಾ ಟೌನ್‌ಶಿಪ್‌ ಬಳಿ ನಡೆದಿದೆ.

ಬಂಧಿತ ಆರೋಪಿಯನ್ನು ಉಡುಪಿ ಕೇಳಾರ್ಕಳಬೆಟ್ಟು ನಿವಾಸಿ ಅಬ್ದುಲ್‌ ಜಬ್ಬಾರ್‌ (27) ಎಂದು ಗುರುತಿಸಲಾಗಿದೆ.

ಆರೋಪಿಯಿಂದ ಸುಮಾರು 1,87,500 ಮೌಲ್ಯದ 2 ಕೆಜಿ 344 ಗ್ರಾಂ ತೂಕದ ಗಾಂಜಾ, ಒಂದು ಲಕ್ಷ ಮೌಲ್ಯದ APRILIA ಕಂಪೆನಿಯ ಸ್ಕೂಟರ್, 5.810 ನಗದು, 10 ಸಾವಿರ ಮೌಲ್ಯದ ಮೊಬೈಲ್, ಒಂದು ಚೂರಿ ಸಹಿತ ಒಟ್ಟು 3,04,610 ಲಕ್ಷ ಮೌಲ್ಯದ ಸೊತ್ತುಗಳನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್‌ರವರ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ಪವನ್‌ ನಾಯಕ್, ಸಿಬ್ಬಂದಿಯವರಾದ ಪ್ರವೀಣ್ ಕುಮಾರ್‌, ಪ್ರವೀಣ್‌, ವೆಂಕಟೇಶ್‌, ರಾಜೇಶ್‌, ಯತೀನ್‌ ಕುಮಾರ್‌, ಪ್ರಶಾಂತ್ ಮತ್ತು ಚರಣ್‌ರಾಜ್‌ ರವರನ್ನೊಳಗೊಂಡ ತಂಡ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

Leave a Reply