January 7, 2026
AA-281024-hkpatil

ಬೆಂಗಳೂರು : ವಿಜಯಪುರದ ರೈತರಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್‌ನ್ನು ವಾಪಸ್ ಪಡೆಯುತ್ತೇವೆ ಎಂದು ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರ ಜಮೀನು ಕಬಳಿಕೆ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಬಿಜೆಪಿಯವರು ಅನಾವಶ್ಯಕವಾಗಿ ರಾಜಕೀಯ ಮಾಡ್ತಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡೋದು ಸೂಕ್ತ ಅಲ್ಲ. ರೈತರಿಗೆ ನೋಟಿಸ್ ಹೋಗಿದ್ದರೆ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಎಂ. ಬಿ ಪಾಟೀಲ್ ಹೇಳಿದ್ದಾರೆ. ಸರ್ಕಾರ ನೋಟಿಸ್ ವಾಪಸ್ ಪಡೆಯಲಿದೆ. ಅಲ್ಲಿನ ತಹಶಿಲ್ದಾರ್ ತಪ್ಪು ಮಾಡಿದ್ದಾರೆ. ಹೀಗಾಗಿ ನೋಟಿಸ್ ವಾಪಸ್ ಪಡೆಯೋ ಕೆಲಸ ಮಾಡ್ತೀವಿ. ರಾಜಕೀಯವಾಗಿ ಆರೋಪ ಮಾಡೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಜಮೀರ್ ಅಹಮದ್ ರಾಜೀನಾಮೆಗೆ ಬಿಜೆಪಿ ಆಗ್ರಹ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜಮೀರ್ ಯಾಕೆ ರಾಜೀನಾಮೆ ಕೊಡಬೇಕು? ತಹಶಿಲ್ದಾರ್ ತಪ್ಪು ಮಾಡಿರೋದು. ತಹಶಿಲ್ದಾರ್ ನೊಟೀಸ್ ಕೊಟ್ಟಿದ್ರೆ ಅದನ್ನು ಡಿಸಿ ನೋಡ್ತಾರೆ. ಅದಕ್ಕೂ ಮೇಲೆ ಸರ್ಕಾರ ಇದೆ. ಹೀಗಿರುವಾಗ ಜಮೀರ್ ಯಾಕೆ ರಾಜೀನಾಮೆ ನೀಡಬೇಕು? ಎಂ.ಬಿ ಪಾಟೀಲ್ ಎಲ್ಲಾ ಗೊಂದಲಗಳನ್ನ ನಿವಾರಣೆ ಮಾಡಿದ್ದಾರೆ. ಈಗ ಯಾವುದೇ ಗೊಂದಲವಿಲ್ಲ ಎಂದರು.

About The Author

Leave a Reply