ಕಾಸರಗೋಡು: ದೇವಸ್ಥಾನದ ಉತ್ಸವದ ವೇಳೆ ಪಟಾಕಿ ದುರಂತ; 154 ಮಂದಿಗೆ ಗಾಯ..!

ಕಾಸರಗೋಡು: ನೀಲೇಶ್ವರ ಸಮೀಪದ ಅಂಜುತಂಬಲಂ ವೀರರ್ಕಾವ್ ದೈವ ಕ್ಷೇತ್ರ ಉತ್ಸವದ ಸಂದರ್ಭದಲ್ಲಿ ಪಟಾಕಿ ಸಂಗ್ರಹ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಟ್ಟು 154 ಜನರು ಗಾಯಗೊಂಡಿದ್ದಾರೆ.
ಅಪಘಾತದಲ್ಲಿ 97 ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾಧಿಕಾರಿ ಇಂಬಶೇಖರ್ ತಿಳಿಸಿದ್ದಾರೆ. ಸೋಮವಾರ ತಡ ರಾತ್ರಿ 12 ಗಂಟೆಯ ವೇಳೆಗೆ ನಾಡನ್ನೆ ನಡುಗಿಸಿದ ಈ ದುರ್ಘಟನೆ ಸಂಭವಿಸಿದೆ.

ಜನ ಸಮೂಹ ಗುಂಪಾಗಿ ಸೇರಿದ್ದ ವೇಳೆ ಪಟಾಕಿ ಸಿಡಿಸಲಾಗಿದ್ದು ಈ ವೇಳೆ ಅಸುರಕ್ಷಿತವಾಗಿ ದಾಸ್ತಾನಿಸಿರಿದ್ದ ಪಟಾಕಿಗೆ ಒಮ್ಮಿಂದೊಮ್ಮೆಲೆ ಬೆಂಕಿ ಹತ್ತಿಕೊಂಡಿದ್ದು ಮಕ್ಕಳು ಮಹಿಳೆಯ ಸಹಿತ ಜನ‌ಗುಂಪಾಗಿ ಓಡತೊಡಗಿದ್ದರು‌.

ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಂಚುತಂಬಲಂ ವೀರರ್ಕವ್ ಸಮಿತಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಬಂಧಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ನೂರಾರು ಜನರು ಸೇರಿದ್ದರು.

ಸುಟ್ಟಗಾಯಗಳಲ್ಲದೆ, ಕಾಲ್ತುಳಿತದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಅನುಮತಿ ಇಲ್ಲದೆ ಪಟಾಕಿಗಳನ್ನು ಸಂಗ್ರಹಿಸಲಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಇಂಬಶೇಖರ್ ತಿಳಿಸಿದ್ದಾರೆ.

ಕನಿಷ್ಠ ಜನ ಅಂತರ ಕಾಯ್ದುಕೊಳ್ಳದೆ ಪಟಾಕಿ ಸಿಡಿಸಲಾಯಿತು. ಕಾನೂನಿನ ಪ್ರಕಾರ 100 ಮೀಟರ್ ಅಗತ್ಯವಿದೆ. ಎರಡ್ಮೂರು ಅಡಿ ಅಂತರದಲ್ಲಿ ಪಟಾಕಿ ಸಿಡಿಸಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪಟಾಕಿಗಳನ್ನು ಸಿಡಿಸುವ ಸಮೀಪದಲ್ಲಿಯೇ ಪಟಾಕಿ ಇಡುತ್ತಿರುವುದು ಅಪಾಯಕ್ಕೆ ಕಾರಣವಾಗಿತ್ತು .ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಸಂದೀಪ್ ಸ್ಥಿತಿ ಚಿಂತಾಜನಕವಾಗಿದೆ.80ರಷ್ಟು ಸುಟ್ಟ ಗಾಯಗಳೊಂದಿಗೆ ಸಂದೀಪ್ ಅವರನ್ನು ಬೆಳಗ್ಗೆ ಪರಿಯಾರಂ ವೈದ್ಯಕೀಯ ಕಾಲೇಜಿನಿಂದ ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಸದ್ಯ ಐವರು ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಞಂಗಾಡ್ ಆಸ್ಪತ್ರೆಯಲ್ಲಿ 16, ಸಂಜೀವನಿ ಆಸ್ಪತ್ರೆಯಲ್ಲಿ 10, ಐಶಾಲ್ ಆಸ್ಪತ್ರೆಯಲ್ಲಿ 17, ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ 5, ಕಣ್ಣೂರು ಮಿಮ್ಸ್‌ನಲ್ಲಿ 18, ಕೋಝಿಕ್ಕೋಡ್ ಮಿಮ್ಸ್‌ನಲ್ಲಿ 2 ಮತ್ತು ಅರಿಮಲ ಆಸ್ಪತ್ರೆಯಲ್ಲಿ 3.ಕೆಎಎಚ್ ಚೆರುವತ್ತೂರಿನಲ್ಲಿ 2, ಮನ್ಸೂರ್ ಆಸ್ಪತ್ರೆಯಲ್ಲಿ 5 ಮತ್ತು ದೀಪಾ ಆಸ್ಪತ್ರೆಯಲ್ಲಿ ಒಬ್ಬರು,18 ಮಂದಿ ಮಂಗಳೂರು ಎಂಜೆ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply