ನೈಟ್ ಡ್ಯೂಟಿ ಮಾಡುತ್ತಿದ್ದ ಮಹಿಳಾ ‘ASI’ ಮೇಲೆ ಚಾಕು ಇರಿತ : ಆರೋಪಿ ವಶಕ್ಕೆ

 ರಾತ್ರಿ ಪಾಳಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ಎಎಸ್‌ಐ ಮೇಲೆ ಜಾರ್ಖಂಡ್ ಮೂಲದ ವ್ಯಕ್ತಿ ಒಬ್ಬ ಚಾಕು ಇರಿದು ಭೀಕರವಾಗಿ ಹಲ್ಲೆ ಮಾಡಿ ಗಾಯಗೊಳಿಸಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ.

ಹೌದು ರಾತ್ರಿಯ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಪೊಲೀಸ್‌ ಎಸ್‌ಐಗೆ ಜಾರ್ಖಂಡ್ ಮೂಲದ ಅಜಯ್ ಸಿಂಗ್ ಎಂಬಾತ ಚಾಕು ಇರಿದಿದ್ದು, ಎಎಸ್‌ಐ ಬಾನು ಚಾಕು ಇರಿತಕ್ಕೊಳಗಾಗಿದ್ದಾರೆ.

ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿಯ ಪಾಳಿಯಲ್ಲಿ ತಿರುಗುತ್ತಿದ್ದ ಎ ಎಸ್ ಐ ಬಾನು ಅವರು, ಜಾರ್ಖಂಡ್ ಮೂಲದ ಅಜಯ್ ಸಿಂಗನನ್ನು ಇಷ್ಟೊತ್ತಿನಲ್ಲಿ ಯಾಕೆ ಓಡಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ ಇದಕ್ಕೆ ಅಜಯ್ ಸಿಂಗ್ ಎಎಸ್‌ಐ ಬಾಲು ಮೇಲೆ ಚಾಕು ಇರಿದು ಹಲ್ಲೆ ಮಾಡಿದ್ದಾನೆ.ಆರೋಪಿ ಅಜಯ್ ಸಿಂಗ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply