
ಮಂಗಳೂರು: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮುಂಬೈ ಸೌತ್ ಸೆಂಟ್ರಲ್‌ನ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಿಗೆ AICC ಉಸ್ತುವಾರಿಯಾಗಿ ಮಾಜಿ ಸಚಿವ B ರಮಾನಾಥ ರೈ ಅವರನ್ನು AICC ನೇಮಕ ಮಾಡಿದೆ.



AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಈ ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರದ ಉಸ್ತುವಾರಿ, ಮಹಾರಾಷ್ಟ್ರ ಮತ್ತು ಅಧ್ಯಕ್ಷರು, ಮಹಾರಾಷ್ಟ್ರ ಪಿಸಿಸಿ ಅವರೊಂದಿಗೆ ಆದಷ್ಟು ಬೇಗ ಸಂಪರ್ಕದಲ್ಲಿರಲು AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ರಮಾನಾಥ ರೈ ಅವರನ್ನು ವಿನಂತಿಸಿದ್ದಾರೆ.