November 28, 2025
WhatsApp Image 2024-10-30 at 2.45.55 PM

ಶಿರೂರು: ದುಬೈ ಯ್  ಅಲ್ ಜದ್ದಾಫ್ ನಲ್ಲಿರುವ DHA Blood Donation Centre ನಲ್ಲಿ ಪ್ರವಾಸಿ ನಾಖುದಾ ಶಿರೂರ ಯು.ಎ.ಇ ವತಿಯಿಂದ ರಕ್ತದಾನ ಮಾಡಿ ಮಾನವೀಯತೆಯ ಸಂದೇಶ ಸಾರಲಾಯಿತು. ಪ್ರವಾಸಿ ನಾಖುದಾ ಯು.ಎ. ಇ ಒಕ್ಕೂಟದ ವತಿಯಿಂದ ಕರೆ ನೀಡಿದ ಈ ಕಾರ್ಯಕ್ರಮವು ರಕ್ತದಾನಿಗಳ ಮೂಲಕ ಯಶಸ್ವಿಯಾಯಿತು.

ಬಳಿಕ ಒಕ್ಕೂಟದ ಪರವಾಗಿ ತಮ್ಮ ತಮ್ಮ ವಿಚಾರ ವಿಮರ್ಶೆಯಲ್ಲಿ ಭಾಗಿಯಾಗಿ , ಈ ಪವಿತ್ರ ಕಾರ್ಯಕ್ರಮದ ಬಗ್ಗೆ ಅತೀವ ಸಂತೋಷ ವ್ಯಕ್ತ ಪಡಿಸಿ, ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಖೋಖಾ  ಅಬು ಅಹ್ಮದ್ ರವರು ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿ, ಭಾಗಿಯಾದ ಸರ್ವರಿಗೂ ಸ್ವಾಗತಿಸುತ್ತಾ ಕಾರ್ಯಕ್ರಮ ಯಶಸ್ವಿ ಮಾಡಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಮೌಲಾನಾ ಜಾವೀದ್ ರವರು ಕಾರ್ಯಕ್ರಮದ ಬಗ್ಗೆ ಅತೀವ ಸಂತೋಷ ವ್ಯಕ್ತ ಪಡಿಸುತ್ತಾ, ಈ ಕಾರ್ಯಕ್ರಮವು ನಾವು ಮಾಡಿದ ಪವಿತ್ರ ಕಾರ್ಯಕ್ರಮ ಊಹಿಸಲೂ ಸಾಧ್ಯವಾದಂತಹ ಕಾರ್ಯಕ್ರಮ ನಮ್ಮಿಂದ ಸಾಧ್ಯವಾಗಿದೆ ಹಾಗೂ ಇದರಿಂದ ನಾವು ನಮ್ಮನ್ನು ಪವಿತ್ರ ಕೆಲಸಗಳಲ್ಲಿ ತೊಡಗಿಸಿದ್ದೇವೆ ಎಂದರು. ನಾವು ಇಂತಹ ಕಾರ್ಯಕ್ರಮದಲ್ಲಿ ಸ್ವ – ಇಚ್ಛೆಯಿಂದ ಭಾಗಿಯಾಗಬೇಕೆಂದರು. ಅಧ್ಯಕ್ಷರಾದ ಎಂ. ಯಾಸೀನ್ ಇತರರು ಅಗತ್ಯ ಸಹಾಯ ನೀಡಿದರು.

ಈ ಸಂದರ್ಭದಲ್ಲಿ  ಮೌಲಾನಾ ಜಾವೀದ್ ಅಧ್ಯಕ್ಷರಾದ ಎಂ.ಯಾಸೀನ್ ಮೊದಲಾದವರು ಉಪಸ್ಥಿತರಿದ್ದರು.

About The Author

Leave a Reply