August 30, 2025
WhatsApp Image 2024-12-04 at 12.02.30 PM

ಬೆಂಗಳೂರು: ಎಲ್ಲಾ ಕೆಎಸ್‌ಆರ್ಟಿಸಿ ಬಸ್ ಗಳಿಗೆ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ ವಿಸ್ತರಿಸಲಾಗಿದೆ. ಸುಮಾರು 9,000 ಬಸ್ ಗಳಲ್ಲಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ನವೆಂಬರ್ 6ರಂದು ಕೆಎಸ್‌ಆರ್ಟಿಸಿ ಬಸ್ ಗಳಲ್ಲಿ ಕ್ಯೂಆರ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ನಿಗಮದ ಎಲ್ಲಾ 8949 ಬಸ್ ಗಳಿಗೆ ಈ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ. ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ ಯಶಸ್ವಿಯಾಗಿದ್ದು, ಸಂಸ್ಥೆಯ ದೈನಂದಿನ ಆದಾಯದಲ್ಲಿ 30 – 40 ಲಕ್ಷ ರೂಪಾಯಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆಯ ಮೂಲಕವೇ ಪಾವತಿಯಾಗುತ್ತಿದೆ.

ಯುಪಿಐ ಪಾವತಿ ಸುಲಭಗೊಳಿಸಲು ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು(ETM) ಬಳಕೆ ಮಾಡಲಾಗುತ್ತಿದೆ. ಎಲ್ಲಾ ಕೆಎಸ್‌ಆರ್ಟಿಸಿ ಬಸ್ ಗಳಲ್ಲಿ ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ಪಾವತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗಿದೆ ಎಂದು ಹೇಳಲಾಗಿದೆ.

About The Author

Leave a Reply