ಮಂಗಳೂರು: ವ್ಯಕ್ತಿಯೊಬ್ಬ ಮಂಗಳೂರಿನ ಜಿಲ್ಲಾ ಕಾರಾಗೃಹದೊಳಗೆ ಗಾಂಜಾ ಪ್ಯಾಕೆಟ್ ಎಸೆದು ಪರಾರಿಯಾಗಿರುವ ಘಟನೆ ನಡೆದಿದೆ.
ಶುಕ್ರವಾರದಂದು ಮುಖ್ಯರಸ್ತೆಯಿಂದ ಓರ್ವ ಕವರ್‌ನ್ನು ಜಿಲ್ಲಾ ಕಾರಾಗೃಹದ ಕ್ವಾರಂಟೈನ್ ವಿಭಾಗಕ್ಕೆ ಎಸೆದು ಓಡಿ ಹೋಗುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದರು. ಪರಿಶೀಲನೆ ಮಾಡುವಾಗ ಪ್ಲಾಸ್ಟಿಕ್ ಕವರ್ ಸಿಕ್ಕಿದ್ದು ಅದರೊಳಗೆ ಗಾಂಜಾ ಮತ್ತು ಬಿಳಿ ಬಣ್ಣದ ಹರಳಿನಂತಿರುವ ಅನುಮಾನಸ್ಪದ ವಸ್ತುಗಳು ಕಂಡುಬಂದಿದೆ. ಈ ಸಂಬಂಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.