ಮೊಬೈಲ್‌ ಹ್ಯಾಕ್‌ ಮಾಡಿ ಒಟಿಪಿ ಪಡೆದು ಬಟ್ಟೆ ವ್ಯಾಪಾರಿಗೆ ಲಕ್ಷಾಂತರ ರೂ. ವಂಚನೆ

ಉಡುಪಿ: ಮೊಬೈಲ್‌ ಹ್ಯಾಕ್‌ ಮಾಡಿ ಒಟಿಪಿ ಪಡೆದು ವ್ಯಾಪಾರಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಮಾಡಿದ ಘಟನೆ ಸಂಭವಿಸಿದೆ. ಮೂಡನಿಡಂಬೂರು ಪರಿವಾರ್‌ ಸ್ವೀಟ್ಸ್‌ ಅಂಗಡಿಯ ಬಳಿ ಮಂಗಳೂರು ಮೂಲದ ವ್ಯಾಪಾರಿ ಮಜರ್‌ ಅಹಮ್ಮದ್‌ ಅವರು ಕಾಟನ್‌ ಪೀಪಲ್‌ ಎಂಬ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಅಂಗಡಿಗೆ ವ್ಯಾಪಾರಕ್ಕೆಂದು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಬಟ್ಟೆ ವ್ಯಾಪಾರಿಯ ಮೊಬೈಲ್‌ ಅನ್ನು ಯಾವುದೋ ಸಾಫ್ಟ್ ವೇರ್ ನಿಂದ ಹ್ಯಾಕ್‌ ಮಾಡಿ ತನ್ನ ಮೊಬೈಲ್‌ ನಂಬರಿಗೆ ಒಟಿಪಿಗಳು ಬರುವಂತೆ ಮಾಡಿಕೊಂಡಿದ್ದ.ಬಳಿಕ ಹಂತ-ಹಂತವಾಗಿ ವ್ಯಾಪಾರಿಯ ಖಾತೆಯಿಂದ ಒಟ್ಟು 2,49,500 ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾಗಿ ದೂರು ನೀಡಲಾಗಿದೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply