
ವಿಟ್ಲ : ಕನ್ಯಾನ ಜಂಕ್ಷನಲ್ಲಿನ ಅಂಗಡಿಯೊಂದರ ಹಿಂದೆ ಯುವಕನೋರ್ವನ ಮೃತದೇಹ ಕಂಡುಬಂದಿದೆ. ಬುಧವಾರ ಮುಸ್ಸಂಜೆ ಕೆಲ ಕ್ಷಣಗಳ ಮೊದಲು ಕುಳಿತುಕೊಂಡಿದ್ದ ಯುವಕ ಇದ್ದಕ್ಕಿದ್ದಂತೆ ಮೃತಪಟ್ಟ ವಿಚಾರ ಜನರ ಕುತೂಹಲಕ್ಕೆ ಕಾರಣವಾಗಿದೆ.



ಸ್ಥಳಕ್ಕೆ ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇಖಾ ಭೇಟಿ ನೀಡಿದ್ದಾರೆ.
ಕನ್ಯಾನ ನಿವಾಸಿ ಪಿಲಿಚಾಮುಂಡಿ ಗುಡ್ಡೆ ನಿವಾಸಿ ಸುರೇಶ್ ನಾಯ್ಕ (32) ಮೃತಪಟ್ಟ ವ್ಯಕ್ತಿಯೆಂದು ಪರಿಚಯಸ್ಥರು ತಿಳಿಸಿದ್ದಾರೆ. ವಿಪರೀತ ಕುಡಿತದ ಚಟ ಹೊಂದಿರುವ ಈತ ಅದೇ ಕಾರಣದಿಂದಾಗಿ ಕುಸಿದುಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಸ್ಥಳಕ್ಕೆ 112ಪೊಲೀಸರು ಹಾಗೂ ವಿಟ್ಲ ಪೊಲೀಸರು ಆಗಮಿಸಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.