ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಮದ್ದ ಎಂಬಲ್ಲಿ ಗಾಂಜಾ ವ್ಯಸನಿ ರೌಡಿ ಶೀಟರ್ ಹಸೈನಾರ್ ಮತ್ತು ಇತರರು ಅಕ್ರಮ ಕೂಟ ಕಟ್ಟಿಕೊಂಡು ಕೊಲೆ ನಡೆಸುವ ಉದ್ದೇಶದಿಂದ ಶಾಹುಲ್ ಹಮೀದ್ ರವರ ಮನೆಗೆ ರಾತ್ರಿ 1:30 ರ ಹೊತ್ತಿಗೆ ಅಕ್ರಮ ಪ್ರವೇಶಗೈದು ಗರ್ಭಿಣಿ ಮಹಿಳೆ ಸಹಿತ ಮನೆಯಲ್ಲಿದ್ದ ಸದಸ್ಯರು ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳನ್ನು SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭೇಟಿಯಾಗಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಬಳಿಕ ಘಟನೆಯನ್ನು ಅತ್ಯಂತ ಕಟು ಶಬ್ದಗಳಲ್ಲಿ ಖಂಡಿಸಿದ ಮಜೀದ್ ರವರು ಅಕ್ರಮ ಮರಳು ದಂದೆ ನಡೆಸುವ ಸಮಾಜಘಾತುಕ ಶಕ್ತಿಗಳನ್ನು ,ಗಾಂಜಾ ಪೆಡ್ಲರ್ಗಳನ್ನು ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕು .ಮತ್ತು ಅರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಪೊಲೀಸ್ ಇಲಾಖೆ ಯಾವುದೇ ಒತ್ತಡಗಳಿಗೆ ಮಣಿಯದೆ ಇಂತಹ ಸಮಾಜ ವಿರೋಧಿಗಳನ್ನು, ಹೆಡೆಮುರಿ ಕಟ್ಟಬೇಕು, ಅದೇರೀತಿ ಇಂತಹ ಗೂಂಡಾಗಳು ರಾಜಾರೋಷವಾಗಿ ಅಕ್ರಮ ಮರಳು ದಂದೆ ನಡೆಸಿ ವಾಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿ ತಾವೇನು ಮಾಡಿದರು ಕೇಳುವವರು ಇಲ್ಲ ಎಂಬ ಅಹಂಕಾರದಿಂದ ಮೆರೆಯುತ್ತಿದ್ದಾರೆ, ಆದ್ದರಿಂದ ಇವರು ನಡೆಸುವ ಅಕ್ರಮ ಮರಳು ದಂದೆಗೆ ಶಾಶ್ವತ ಕಡಿವಾಣ ಹಾಕಬೇಕು. ಮತ್ತು ಈಗಾಗಲೇ ಹಲವಾರು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕಿಡಿಗೇಡಿಗಳ ವಿರುದ್ಧ ಇಲಾಖೆ ಯಾವುದೇ ಮೃದು ಧೋರಣೆ ತಳೆಯದೆ ಕಾನೂನಿನ ರುಚಿ ತೋರಿಸಬೇಕು ಇಲ್ಲದಿದ್ದರೆ ಪಕ್ಷದ ವತಿಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಅಬ್ದುಲ್ ಮಜೀದ್ ಎಚ್ಚರಿಕೆ ನೀಡಿದ್ದಾರೆ