
ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಇಂದು ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಗೆ ಇರುವ ಆಡಳಿತಾತ್ಮಕ ದೋಷದ ಕುರಿತು ಸರ್ಕಾರದ ಗಮನ ಸೆಳೆದರು.
ಪತಿ ಪತ್ನಿ ಪ್ರಕರಣಗಳಲ್ಲಿ ಏಳು ವರ್ಷದ ಮಿತಿಯನ್ನು ಸರಳೀಕರಣಗೊಳಿಸಿ ಪೊಲೀಸರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಶೀಘ್ರವೇ ಕಾರ್ಯಕಾರಿ ಆದೇಶ ಹೊರಡಿಸುವಂತೆ ಗೃಹ ಸಚಿವರನ್ನು ಶೂನ್ಯವೇಳೆಯಲ್ಲಿ ಆಗ್ರಹಿಸಿದರು.


