January 28, 2026
WhatsApp Image 2024-12-28 at 10.29.00 AM

ಪುತ್ತೂರು: ಬದ್ರಿಯಾ ಮಸೀದಿ ಹಾಗೂ ನೂರುಲ್ ಹುದಾ ಮದ್ರಸ ಬಳ್ಳಮಜಲು ಕುರಿಯ ಇದರ ಆಶ್ರಯದಲ್ಲಿ ಜಲಾಲಿಯಾ ರಾತೀಬ್ ಮತ್ತು ರಾಜ್ಯ ಮಟ್ಟದ ಹೊನಲು ಬೆಳಕಿನ ಆಹ್ವಾನಿತ ತಂಡಗಳ ದಫ್ ಸ್ಪರ್ಧೆ ಇಂದು ಮಗ್ರಿಬ್ ನಮಾಜಿನ ಬಳಿಕ ನಡೆಯಲಿದೆ.
ಬಳ್ಳಮಜಲು ಕುರಿಯ ಬದ್ರಿಯಾ ಮಸೀದಿಯ ಗೌರವಾಧ್ಯಕ್ಷರಾದ ಅಸ್ಸಯ್ಯದ್ ಯಹ್ಯಾ ತಂಙಳ್ ಪೋಳ್ಯ ದುವಾ ನೆರವೇರಿಸಲಿದ್ದು ಸ್ಥಳೀಯ ಅಧ್ಯಾಪಕರಾದ ಅಬ್ಬಾಸ್ ಮುಸ್ಲಿಯಾರ್ ಕಟ್ಟತ್ತಡ್ಕ ಉದ್ಘಾಟಿಸಲಿದ್ದಾರೆ.

ಬಳ್ಳಮಜಲು ಕುರಿಯ ಬದ್ರಿಯಾ ಮಸೀದಿಯ ಅಧ್ಯಕ್ಷ ರಫೀಕ್ ಕುರಿಯ ಅಧ್ಯಕ್ಷತೆ ವಹಿಸಲಿದ್ದು ಕೂರ್ನಡ್ಕ ಜುಮಾ ಮಸೀದಿ ಮುದರ್ರಿಸ್ ಉನೈಸ್ ಫೈಝಿ ವಳವೂರ್ ಪ್ರಾಸ್ತಾವಿಕ ಭಾಷಣ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಲವರು ಗಣ್ಯಾತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಗ್ರಿಬ್ ನಮಾಜಿನ ಬಳಿಕ ಅಸ್ಸಯ್ಯದ್ ಯಹ್ಯಾ ತಂಙಳ್ ಪೋಳ್ಯರವರ ನೇತೃತ್ವದಲ್ಲಿ ಜಲಾಲಿಯಾ ರಾತೀಬ್ ನಡೆಯಲಿದೆ.. ತದನಂತರ ಸ್ಥಳೀಯ ದಫ್ ತಂಡಗಳಿಂದ ದಫ್ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…

About The Author

Leave a Reply