![](https://i0.wp.com/mediaonekannada.com/wp-content/uploads/2024/09/WhatsApp-Image-2024-09-24-at-7.15.49-PM.jpeg?fit=1166%2C1600&ssl=1)
ಮಂಗಳೂರು: ಹೊಸ ವರ್ಷದ ನೆಪದಲ್ಲಿ ಯುವ ಜನತೆಯನ್ನು ಗುರಿಯಾಗಿಸಿ ನಡೆಸುವ ಎಲ್ಲ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ನಿರ್ಬಂಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪೊಲೀಸ್ ಇಲಾಖೆಗೆ ಮನವಿ ಮಾಡಿವೆ.
![](https://i0.wp.com/mediaonekannada.com/wp-content/uploads/2024/11/WhatsApp-Image-2024-11-05-at-10.49.10.jpeg?fit=1091%2C839&ssl=1)
![](https://i0.wp.com/mediaonekannada.com/wp-content/uploads/2024/11/WhatsApp-Image-2024-11-04-at-13.51.12.jpeg?fit=1200%2C1000&ssl=1)
![](https://i0.wp.com/mediaonekannada.com/wp-content/uploads/2024/10/IMG-20241029-WA0008.jpg?fit=1600%2C1191&ssl=1)
![](https://i0.wp.com/mediaonekannada.com/wp-content/uploads/2024/10/IMG-20241029-WA0009.jpg?fit=1431%2C859&ssl=1)
ಹಲವಾರು ವರ್ಷದಿಂದ ಡ್ರಗ್ಸ್ ಮಾಫಿಯಾ ಕರಾವಳಿ ಭಾಗದಲ್ಲಿ ವ್ಯಾಪಕವಾಗಿದ್ದು, ಪಾರ್ಟಿಗಳಿಗೆ ಪೂರೈಕೆಯಾಗುತ್ತಿದೆ. ಸಾಕಷ್ಟು ಯುವಕ ಯುವತಿಯರ ಜೀವನ ಹಾಳಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಸರಕಾರದ ಗಮನಕ್ಕೆ ಸಾಕಷ್ಟು ಬಾರಿ ಇದನ್ನು ತರಲಾಗಿದೆ. ಮಂಗಳೂರಿನಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿದ್ದು, ಇದರ ಹಿಂದೆ ದೊಡ್ಡ ಜಾಲವೇ ಇದೆ. ಕೇರಳ-ಗೋವಾ ಸಹಿತ ವಿವಿಧ ರಾಜ್ಯಗಳಿಂದ ಮಾದಕ ಪದಾರ್ಥ ಬರುತ್ತಿರುವುದು ಆತಂಕಕಾರಿ ವಿಚಾರ.
ಈ ಸಂದರ್ಭ ನಡೆಯುವ ಪಾರ್ಟಿಗಳಲ್ಲಿ ಡ್ರಗ್ಸ್ ಮಾತ್ರವಲ್ಲದೆ ಕೇರಳದಿಂದ ಯುವಕರು ಬಂದು ಯುವತಿಯರ ಬಾಳು ಹಾಳು ಮಾಡುವ ಕೆಲಸವನ್ನೂ ಮಾಡುತ್ತಾರೆ. ಕಾನೂನಿಗೆ ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷದ ಪಾರ್ಟಿಗೆ ಪೊಲೀಸ್ ಆಯುಕ್ತರು ಅವಕಾಶ ಕೊಡಬಾರದು ಎಂದು ವಿಹಿಂಪ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಆಗ್ರಹಿಸಿದ್ದಾರೆ.
ಪಾರ್ಟಿಗಳ ಮೇಲೆ ನಿಷೇಧ ಹೇರುವಂತೆ ಎಲ್ಲ ಪೊಲೀಸ್ ಠಾಣೆಗಳಿಗೂ ಮನವಿ ನೀಡಲಾಗುವುದು. ಪೊಲೀಸರು ಕ್ರಮ ಕೈಗೊಳ್ಳದಿದ್ದಲ್ಲಿ ಬಜರಂಗದಳದ ಕಾರ್ಯಕರ್ತರೇ ಆ ಕೆಲಸವನ್ನು ಮಾಡಲಿದ್ದಾರೆ. ಡ್ರಗ್ಸ್ ಮುಕ್ತ ಮಂಗಳೂರು ಕೇವಲ ಮಾತಿಗೆ ಮಾತ್ರ ಸೀಮಿತವಾಗದೆ ಕಾರ್ಯರೂಪಕ್ಕೆ ತರಬೇಕು ಎಂದು ಬಜರಂಗದಳ ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ಒತ್ತಾಯಿಸಿದ್ದಾರೆ.
![](https://i0.wp.com/mediaonekannada.com/wp-content/uploads/2024/10/addd.jpg?fit=720%2C1436&ssl=1)