February 10, 2026
WhatsApp Image 2024-12-30 at 10.13.48 AM

ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಮಗು ಮೃತಪಟ್ಟ ಘಟನೆ ನೆ.ಮುಡೂರು ಗ್ರಾಮದ ಗಾಳಿಮುಖ ಗೋಳಿತ್ತಡಿ ಎಂಬಲ್ಲಿ ಡಿ.29ರಂದು ಸಂಜೆ ನಡೆದಿದೆ.

ಮೃತಪಟ್ಟ ಮಗುವನ್ನು ಗೋಳಿತ್ತಡಿ ನಿವಾಸಿ ಸಿಂಸಾರ್ ಎಂಬವರ ಮೂರೂವರೆ ವರ್ಷದ ಪುತ್ರ ಝನು ಎಂದು ಗುರುತಿಸಲಾಗಿದೆ.

ಮಗು ಆಟವಾಡುತ್ತಾ ಮನೆಯ ಅರ್ಥ್ ಗೆ ಸಂಬಂಧಿಸಿದ ತಂತಿಯನ್ನು ಮುಟ್ಟಿದ್ದು ಈ ವೇಳೆ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಮಗುವನ್ನು ರಕ್ಷಿಸಲು ಹೋದ ಮಗುವಿನ ಅಜ್ಜ ಶಾಫಿ ಅವರಿಗೆ ವಿದ್ಯುತ್ ಶಾಕ್ ಹೊಡೆದು ಗಂಭೀರ ಸ್ಥಿತಿಯಲ್ಲಿ ಚೆರ್ಕಳದ ಆಸ್ಪತ್ರೆಗೆ ದಾಖಲಾಗಿದ್ದಾರೆ.

About The Author

Leave a Reply