
ಸ್ಪೈಸ್ ಸ್ಪೊಟ್ಸ್ ಮತ್ತು ಚಾರಿಟಿ ಕ್ಲಬ್ ( ರಿ ) ತಲಕ್ಕಿ ವತಿಯಿಂದ ಇದೆ ಜನವರಿ 23.1.2025 ರಿಂದ 26.1.2025 ರವರೆಗೆ ನಡೆಯುವ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಮುಡಿಪಿವಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಸಾಗಿ ಬರಲಿದೆ .



ಕಳೆದ ಒಂಬತ್ತು ವರ್ಷಗಳಿಂದ ಈ ಕ್ರೀಡಾ ಕೂಟವನ್ನು ನಡೆಸಿಕೊಂಡು ಬಂದಿದೆ ಮುಡಿಪುವಿನ ಕೀರ್ತಿಪತಾಕೆಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟ ಸಾಕ್ಷಿಯಾಗಲಿದೆ, ಹಾಗೂ ಅಪಾರ ಸಂಖ್ಯೆಯ ಪ್ರೇಕ್ಷಕರನ್ನ ಕರೆತಂದ ಹೆಗ್ಗಳಿಕೆ ಇವರದ್ದಾಗಿದೆ, ಯಾವುದೇ ಜಾತಿ ಮತ ಬೇದ ಭಾವವಿಲ್ಲದೆ ಅತ್ಯಂತ ಶಿಸ್ತು ಬದ್ಧವಾಗಿ ವಿಜೃಂಭಣೆಯಿಂದ ಕ್ರಿಕೆಟ್ ಪಂದ್ಯಾಟವನ್ನು ನಡೆಸುತ್ತಾ ಬಂದಿದೆ.
ಯಾವುದೇ ಲೋಪ ದೋಷ ವಿಲ್ಲದೆ ಎಲ್ಲರನ್ನು ಒಂದೇ ಎಂದು ಭಾವಿಸಿ ಈ ಕ್ರೀಡಾ ಕೂಟವನ್ನು ಕಳೆದ ಒಂಬತ್ತು ವರ್ಷಗಳಿಂದ ಸಾಮಾಜಿಕ ಬದ್ಧತೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಬಾಳೆಪುಣಿ ಗ್ರಾಮ ಪಂಚಾಯತ್ ಆಧಿನಕ್ಕೆ ಒಳಪಟ್ಟ ಮುಡಿಪು ಚರ್ಚ್ ಹತ್ತಿರದ ಮೈದಾನದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರೀಡಾಕೂಟವನ್ನು ಏರ್ಪಡಿಸುತ್ತಾ ಬಂದಿರುತ್ತಾರೆ ಮತ್ತು ಎಲ್ಲರ ಪ್ರಸಂಸೆಗೆ ಪಾತ್ರವಾಗಿರುತ್ತದೆ. ಈ ಬಾರಿಯೂ ಅಂಡರ್ ಆರ್ಮ್ ಕ್ರಿಕೆಟ್ ಅಭಿಮಾನಿಗಳಿಗೆ ಇನ್ನಷ್ಟು ಮನರಂಜನೆ ನೀಡುತ್ತಾ, ಇನ್ನಷ್ಟು ಯಶಸ್ವಿಯತ್ತ ಪಂದ್ಯಾಕೂಟ ಸಾಗಲಿ ಎಂದು ಹಾರೈಸುತ್ತಾ, ,,,,
ಮಹಮ್ಮದ್ ಅಸ್ಗರ್, ನ್ಯಾಯವಾದಿ
ಕಾರ್ಯಕಾರಣಿ ಸದಸ್ಯರು, ಮಂಗಳೂರು ವಕೀಲರ ಸಂಘ ( ರಿ ) ಮಂಗಳೂರು