ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ರೂ.ಗೆದ್ದ ರಮಝಾನ್

ಬಾಲಿವುಡ್‌ ಬಿಗ್‌-ಬಿ ಅಮಿತಾಭ್‌ ಬಚ್ಚನ್‌ ನಡೆಸಿಕೊಡುವ ಭಾರತದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಕನ್ನಡಿಗನೊಬ್ಬ ಬರೋಬ್ಬರಿ 50 ಲಕ್ಷ ರೂ.ಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ. ಅಷ್ಟಕ್ಕೂ ಆತನೊಬ್ಬ ಬಡ ವೆಲ್ಡರ್‌ ಕಾರ್ಮಿಕನ ಮಗನಾಗಿದ್ದು, ಮೂಲತಃ ಬಾಗಲಕೋಟೆಯ ಮಹಾಲಿಂಗಪುರ ಪಟ್ಟಣದ ಯುವಕ ರಂಜಾನ್‌ ಮಲಿಕ್‌ ಬಾಬ್‌ ಫೀರ್‌ಜಾದ್‌ ಅವರೇ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಐವತ್ತು ಲಕ್ಷ ಗೆದ್ದ ಕನ್ನಡಿಗ.

ಆರಂಭದಿಂದಲೂ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತಾ ಬಂದ ರಂಜಾನ್‌ ಎಲ್ಲಾ ಹಂತದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಆ ಮೂಲಕ ಒಟ್ಟು 12 ಪ್ರಶ್ನೆಗಳಲ್ಲಿ 11ಕ್ಕೆ ಸರಿಯಾದ ಉತ್ತರ ನೀಡಿ ಬರೋಬ್ಬರಿ 50ಲಕ್ಷ ರೂ. ಗೆದ್ದರು. ಒಂದು ಕೋಟಿಗೆ ಕೇವಲ ಒಂದು ಪ್ರಶ್ನೆ ಹಿಂದೆ ಇದ್ದ ಅವರು ಉತ್ತರ ಸರಿಯಾಗಿ ತಿಳಿಯದ ಕಾರಣ ಕ್ವಿಟ್‌ ಮಾಡಿದ್ದಾರೆ. ಆ ಮೂಲಕ ಐವತ್ತು ಲಕ್ಷ ರೂ ಗಳಿಸಿದ ಸಾಧನೆ ಮಾಡಿದ್ದಾರೆ.

ವೆಲ್ಡರ್‌ ಮಗನಾಗಿ ಅತಿ ಬಡಕುಟುಂಬದಿಂದ ಬಂದ ರಂಜಾಬ್‌ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದರು. ಪಾರ್ಟ್‌ಟೈಂ ಕೆಲಸದೊಂದಿಗೆ ಬಿಎ ಪದವಿಯನ್ನು ಪಡೆದಿದ್ದ ಇವರು, ಸ್ಪರ್ಧಾತ್ಮಕ ವಿಷಯಗಳಿಗೆ ತಯಾರಿ ನಡೆಸುತ್ತಿದ್ದರು. ಹೀಗಿರುವಾಗ ಕೌನ್‌ ಬನೇಗಾ ಕರೋಡ್‌ಪತಿ ಶೋಗೆ ಅರ್ಜಿ ಸಲ್ಲಿಸಿದ್ದು, ಅಲ್ಲಿಗೆ ಆಯ್ಕೆಯಾದ ರಂಜಾನ್‌ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಈ ದಾಖಲೆ ಬರೆದಿದ್ದಾರೆ. ಇತ್ತ ಐವತ್ತು ಲಕ್ಷ ಗೆದ್ದುಬಂದ ರಂಜಾನ್‌ಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದ್ದಾರೆ. ಊರಿನಲ್ಲಿ ಮರೆವಣಿಗೆ ಮಾಡುವ ಮೂಲಕ ಅವರ ಸಾಧನೆಗೆ ಗೌರವ ತೋರಿದ್ದಾರೆ.

Leave a Reply