February 16, 2026
WhatsApp Image 2025-01-28 at 5.51.46 PM

ಮೈಸೂರು : ನನ್ನ ಇಮೇಜ್ ಗೆ ಡ್ಯಾಮೇಜ್ ಮಾಡುವ ಕೆಲಸ ನಡೆಯುತ್ತಿದೆ. ನನ್ನ ಟಾರ್ಗೆಟ್ ಮಾಡಿ ಇಡಿ ತನಿಖೆ ನಡೆಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಹಣ ವರ್ಗಾವಣೆ ಆಗಿರೋದಕ್ಕೆ ಸಾಕ್ಷಿ ಏನಿದೆ.? ಉದ್ದೇಶ ಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ತನಿಖೆ ಮಾಡುತ್ತಿರುವ ಲೋಕಾಯುಕ್ತ ಸ್ವತಂತ್ರ ತನಿಖೆ ಅಲ್ಲವೇ? ಬೇಕು ಅಂತಾನೆ ರಾಜಕೀಯ ಮಾಡಲಾಗುತ್ತಿದೆ. ಇಡಿ ರಿಲೀಸ್ ಮಾಡಿರುವುದು ಸೀಜ್ ರಿಪೋರ್ಟ್ ಅಷ್ಟೇ ಎಂದರು.

ಮುಡಾ ಹಗರಣದಲ್ಲಿ ನನ್ನನ್ನು ಟಾರ್ಗೆಟ್ ಮಾಡಿ ರಾಜಕೀಯ ಮಾಡಲಾಗುತ್ತಿದೆ. ನನ್ನ ಇಮೇಜ್ ಗೆ ಧಕ್ಕೆ ತರುವ ಪ್ರಯತ್ನ ಉದ್ದೇಶ ಪೂರ್ವಕವಾಗಿಯೇ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

About The Author

Leave a Reply