October 28, 2025
WhatsApp Image 2025-03-08 at 12.54.34 PM

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾರ ಫಿಟ್ನೆಸ್ ಬಗ್ಗೆ ಟೀಕಿಸಿ ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್ ನಾಯಕಿ ಶಮಾ, ಈಗ ‘ಗಣಿತದ ಮೂಲ ಇಸ್ಲಾಂ’ ಎಂಬ ಹೇಳಿಕೆಯಿಂದ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ.

ಇತ್ತೀಚೆಗೆ, ರಂಜಾನ್ ತಿಂಗಳಲ್ಲಿ ಉಪವಾಸ ಆಚರಿಸದಿದ್ದಕ್ಕಾಗಿ ಮುಸ್ಲಿಂ ಜಮಾತ್ ಅಧ್ಯಕ್ಷ ಶಹಾಬುದ್ದೀನ್ ರಜ್ಜಿ ಭಾರತದ ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿಯನ್ನು ‘ಕ್ರಿಮಿನಲ್’ ಎಂದು ಕರೆದು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಮಾ, “ಪ್ರಯಾಣದಲ್ಲಿರುವವರು ಉಪವಾಸ ಮಾಡಬೇಕೆಂದು ಇಸ್ಲಾಂ ಹೇಳಿಲ್ಲ. ಇಸ್ಲಾಂ ವೈಜ್ಞಾನಿಕ ಧರ್ಮ. ಗಣಿತದ ಮೂಲವೂ ಆಗಿದೆ” ಎಂದು ಹೇಳಿದ್ದಾರೆ.

ಈ ಹೇಳಿಕೆಗೆ ಬಿಜೆಪಿ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಕಿಡಿಕಾರಿದ್ದು, “ಇದು ಅಸಂಬದ್ಧ” ಎಂದು ಟೀಕಿಸಿದ್ದಾರೆ.

About The Author

Leave a Reply