

ಬೋವಿಕಾನಂ: ಮುಳಿಯಾರ್ ತಣಲ್ ಬಡ್ಸ್ ಶಾಲೆಯ ಮಕ್ಕಳ ಕಲಾ-ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಶೈಕ್ಷಣಿಕ ಅಗತ್ಯಗಳಿಗಾಗಿ ಸ್ನೇಹಸ್ಪರ್ಶಂ ಟೈಲ್ಸ್ ವರ್ಕರ್ಸ್ ಚಾರಿಟೇಬಲ್ ಸೊಸೈಟಿಯ ವತಿಯಿಂದ ಸ್ಪೀಕರ್ (ಸೌಂಡ್ ಸಿಸ್ಟಮ್) ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ನೇಹಸ್ಪರ್ಶಂ ಖಜಾಂಚಿ ಖಾದರ್ ಬೋವಿಕಾನಂ ಸ್ವಾಗತ ಕೋರಿದರು. ಬಡ್ಸ್ ಶಾಲೆಯ ಪ್ರಾಂಶುಪಾಲೆ ಸುಮಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು ಸಭೆಯನ್ನು ಮೂರನೇ ವಾರ್ಡ್ ಸದಸ್ಯೆ ಲುಬ್ನಾ ಮುನೀರ್ ಉದ್ಘಾಟಿಸಿದರು. ನಂತರ ಸ್ನೇಹಸ್ಪರ್ಶಂ ಟೈಲ್ಸ್ ವರ್ಕರ್ಸ್ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ರಫೀಕ್ ಬೆದ್ರ ಅವರು ಶಾಲಾ ಅಧಿಕಾರಿಗಳಿಗೆ ಸ್ಪೀಕರ್ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಒಂದನೇ ವಾರ್ಡ್ ಸದಸ್ಯೆ ರುಷ್ದಾ ರಝಾಕ್ ಶುಭಾಶಯ ಕೋರಿ ಮಾತನಾಡಿದರು. ಅಬ್ದುಲ್ ರಹಮಾನ್ ಮುದಲಪ್ಪಾರ, ಮಸೂದ್ ಸಂಟ್ಯಾರ್, ಬದ್ರುದ್ದೀನ್ ಪೊವ್ವಲ್, ಇರ್ಷಾದ್, ಸುನಿಲ್ ಕುಮಾರ್, ಅನಿಲ್ ಕಾನತ್ತೂರ್, ರಶೀದ್ ಬೋವಿಕಾನಂ, ಉಸ್ಮಾನ್ ಮೊದಲಾದವರು ಉಪಸ್ಥಿತರಿದ್ದರು. ಸಭೆಗೆ ಶಾಲಿನಿ ಟೀಚರ್ ವಂದನೆ ಸಲ್ಲಿಸಿದರು.






