
ಮಂಗಳೂರು: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2025-26ನೇ ಸಾಲಿನ ಬಜೆಟ್ ನಾಡಿನ ಪ್ರಗತಿ, ಸಮೃದ್ಧಿ ಹಾಗೂ ಸ್ವಾವಲಂಬನೆಗೆ ಪೂರಕ ವಾಗಿದೆ. ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಯ ಜೊತೆಗೆ ಸಾಮಾಜಿಕ ನ್ಯಾಯಕ್ಕೆ ಹಿಡಿದ ಕನ್ನಡಿಯಾಗಿದೆ.



ವಿಶೇಷವಾಗಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮಹತ್ವದ ಯೋಜನೆ ಗಳನ್ನು ಘೋಷಿಸಲಾಗಿದೆ.
ಅದೇ ರೀತಿಯಲ್ಲಿ ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ದ.ಕ ಜಿಲ್ಲೆ ಸಮಯ 7ರ ನಂತರ ಡೆಡ್ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ರಾಜ್ಯ ಸರ್ಕಾರಕ್ಕೆ ನಿರಿಕ್ಷೆಯ ಸಿಟುಗಳು ದ.ಕ ಜಿಲ್ಲೆಯಲ್ಲಿ ಜಯಗಳಿಸಲು ಸಾಧ್ಯವಾಗದಿದ್ದರೂ ಅಭಿವ್ರದ್ದಿಯ ವಿಚಾರವಾಗಿ ಯಾವೂದೇ ತಾರತಮ್ಯ ಇಲ್ಲ ,ಕರಾವಳಿ ಬಿಜೆಪಿಯ ಶಾಸಕರು ಗಳು ಕರಾವಳಿ ಬಾಗಕ್ಕೆ ಪೂರಕವಾದ ಚಿಂತನೆಗಳನ್ನು ನಡೆಸಿದರೆ ಅಭಿವೃದ್ಧಿಗೆ ಸರ್ಕಾರ ಸಿದ್ದ ಎಂಬ ಮಾತನಾಡಿದ್ದಾರೆ, ಇದ್ದಕ್ಕೆ ಸಂಬಂದಿಸಿ ಕೆಳ ಸಂಘಟನೆಗಳ ನಾಯಕರು ಸದ್ಯಕ್ಕೆ ಮಂಗಳೂರು ನಗರದ ವಾಯವಸ್ತೆ ಸರಿ ಇದೆ ನೈಟ್ ಲೈಪ್ ಮರುಕಳಿಸಿದರೆ ಸಮಸ್ಯೆ ಎದುರಾಗುತ್ತದೆ ಇದನ್ನು ಬದಲಿಸೊದು ಬೇಡ ಎಂಬ ಹೆಳಿಕೆ ನೀಡಿದ್ದಾರೆ ಆದರೆ ನೈಟ್ ಲ್ಯೆಪ್ ಎಂಬುದು ಕೇವಲ ಬಾರ್ ,ಪಬ್ , ಕುಣಿತಗಳು ಎಂಬ ಚಿಂತನೆಗಳಿಂದ ಹೊರಬಂದು ವ್ಯಾಪಾರ ವಹಿವಾಟು ,ಜನರು ಕುಟುಂಬ ಸಮೇತ ರಾತ್ರಿ ಹೊತ್ತು ಭಯಯಬೀತರಾಗದೆ ಜಿವನ ಕಳೆಯುವುದು ,ಯುವಕರು ರಾತ್ರಿಯ ಪಾರ್ಕ್ , ವಾಕಿಂಗ್ ಮುಂತಾದ ಉತ್ತಮ ರೀತೀಯ ನ್ಯೆಟ್ ಲ್ಯೈಪ್ ಪರಿಗಣಿಸಬೇಕಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಈ ಯೋಜನೆಗಳು ಪ್ರಾದೇಶಿಕವಾಗಿ ಆರೋಗ್ಯ ಶಿಕ್ಷಣ, ಮೀನುಗಾರಿಕೆ, ಪ್ರವಾ ಸೋದ್ಯಮ, ಮೂಲ ಸೌಕರ್ಯ, ಪರಿಸರ
ಸಂರಕ್ಷಣೆ ಮತ್ತು ತಂತ್ರಜ್ಞಾನ ಕ್ಷೇತ್ರಗಳನ್ನು ಒಳಗೊಂಡಿದ್ದು, ಕರಾವಳಿಯ ಪ್ರಗತಿಗೆ ಹೊಸ ದಿಕ್ಕು ನೀಡಲಿವೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಸಮಿತಿಯ ವಕ್ತಾರ ಮೌಶಿರ್ ಅಹ್ಮದ್ ಸಾಮನಿಗೆ ತಿಳಿಸಿದ್ದಾರೆ.