

ಪುತ್ತೂರು: ಸ್ಕೂಟರ್ ಒಂದಕ್ಕೆ ಲಾರಿಯೊಂದು ಬಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಘಟನೆ ಪುತ್ತೂರಿನ ಮಾಯ್ ದೆ ದೇವುಸ್ ಚರ್ಚ್ ಎದುರು ನಿನ್ನೆ ನಡೆದಿದೆ.
ಕೆಮ್ಮಿಂಜೆಯ ಫ್ರಾನ್ಸಿಸ್ ಲೂವಿಸ್ ಮೃತಪಟ್ಟ ದುರ್ದೈವಿ. ಇವರು ಕೆಮ್ಮಿಂಜೆಯಿಂದ ಪುತ್ತೂರಿನ ಚರ್ಚ್ ಕಡೆಗೆ ಬರುತ್ತಿದ್ದರು. ಇದೇ ಸಂದರ್ಭ ದರ್ಬೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಬಂದು ಸ್ಕೂಟಿಗೆ ಗುದ್ದಿದೆ.
ಗಂಭೀರ ಗಾಯಗೊಂಡ ಲೂವಿಸ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.