May 11, 2026
WhatsApp Image 2025-07-07 at 2.14.25 PM

ಮಂಗಳೂರು: ಕೇರಳ ಮೂಲದ ಅಶ್ರಫ್ ಮಂಗಳೂರಲ್ಲಿ ಗುಂಪು ದಾಳಿಯಲ್ಲಿ ಬಲಿಯಾಗಿದ್ದರು. ಹೀಗೆ ಹತ್ಯೆಗೆ ಒಳಗಾದಂತ ಅಶ್ರಫ್ ಕುಟುಂಬಕ್ಕೆ ಸಚಿವ ಜಮೀರ್ ಅಹ್ಮದ್ ಹಾಗೂ ಸ್ಪೀಕರ್ ಯು.ಟಿ ಖಾದರ್ ಜೊತೆಗೂಡಿ 15 ಲಕ್ಷ ಆರ್ಥಿಕ ನೆರವನ್ನು ನೀಡಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂಸದ ಕೆ.ಸಿ.ವೇಣುಗೋಪಾಲ್ ಕೋರಿಕೆಯಂತೆ,ಗುಂಪು ಹತ್ಯೆ ಅಶ್ರಫ್ ಕುಟುಂಬಸ್ಥರೊಂದಿಗೆ ಸಭಾಧ್ಯಕ್ಷ ಯು.ಟಿ.ಖಾದರ್,ಸಚಿವ ಜಮೀರ್ ಅಹ್ಮದ್ ಖಾನ್,ಎಐಸಿಸಿ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಚರ್ಚೆ ಹಾಗೂ ಪರಿಹಾರ ವಿತರಣೆ ಮಾಡಿದರು.

ಮಂಗಳೂರಿನ ಕುಡುಪುವಿನಲ್ಲಿ ನಡೆದ ಗುಂಪು ಹತ್ಯೆಗೆ ಸಂಬಂಧಿಸಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೇರಳ ಸಂಸದ ಕೆ.ಸಿ.ವೇಣುಗೋಪಾಲ್ ರವರ ಕೋರಿಕೆ ಹಾಗೂ ಸೂಚನೆಯ ಮೇರೆಗೆ ಸಭಾಧ್ಯಕ್ಷ ಯು.ಟಿ.ಖಾದರ್,ಸಚಿವ ಜಮೀರ್ ಅಹ್ಮದ್ ಖಾನ್, ಎಐಸಿಸಿ ಕಾರ್ಯದರ್ಶಿಗಳಾದ ಬಿ.ಕೆ.ಹರಿಪ್ರಸಾದ್ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾಂಗ್ರೆಸ್ ಮುಖಂಡರಾದ ಜಿ ಎ ಬಾವ ಹಾಗೂ ಮಂಜೇಶ್ವರ ಶಾಸಕರಾದ ಎ ಕೆ ಎಂ ಅಶ್ರಫ್, ರವರು ಗುಂಪು ಹಲ್ಲೆಯಲ್ಲಿ ಹತ್ಯೆಗೀಡಾದ ಅಶ್ರಫ್ ರವರ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿತು.

ಚರ್ಚೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಲು ಸರಕಾರದ ವತಿಯಿಂದ ವಿಶೇಷ ಅಭಿಯೋಜಕರನ್ನು ನೇಮಿಸಲು ತೀರ್ಮಾನಿಸಲಾಯಿತು.ಅದೇ ರೀತಿ ಗುಂಪು ಹತ್ಯಾ ಕಾಯ್ದೆ ಪ್ರಕಾರ ಹತ್ಯೆಯಾದ ಅಶ್ರಫ್ ರವರ ಕುಟುಂಬಕ್ಕೆ ಸರಕಾರದ ವತಿಯಿಂದ ಪರಿಹಾರ ಒದಗಿಸುವ ಕುರಿತಾಗಿ ಕೂಡಾ ಚರ್ಚೆ ನಡೆಸಲಾಯಿತು.ಬಳಿಕ ಮಾನವೀಯತೆಯ ನೆಲೆಯಲ್ಲಿ ತಮ್ಮ ವೈಯುಕ್ತಿಕ ಖಾತೆಗಳಿಂದ ಸಚಿವ ಜಮೀರ್ ಅಹ್ಮದ್ ಖಾನ್ ಹತ್ತು ಲಕ್ಷ ಹಾಗೂ ಯು.ಟಿ.ಖಾದರ್ ಐದು ಲಕ್ಷ ರೂಪಾಯಿಯ ಪರಿಹಾರದ ಮೊತ್ತವನ್ನು ಅಶ್ರಫ್ ಕುಟುಂಬಸ್ಥರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಶ್ರಫ್ ಕುಟುಂಬಸ್ಥರೊಂದಿಗೆ ಮಲಪ್ಪುರಂ ಕಾಂಗ್ರೆಸ್ ಮುಖಂಡರಾದ ನಾಸಿರ್ ವೆಂಗರ ಮುಂತಾದವರು ಉಪಸ್ಥಿತರಿದ್ದರು.

About The Author

Leave a Reply