November 8, 2025
WhatsApp Image 2025-07-14 at 9.29.29 AM

ಡೈವೋರ್ಸ್ ಸಿಕ್ಕ ಖುಷಿಯಲ್ಲಿ ವ್ಯಕ್ತಿಯೊಬ್ಬ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಘಟನೆ ಅಸ್ಸಾಂ ರಾಜ್ಯದ ನಲ್ಬರಿ ಜಿಲ್ಲೆಯಲ್ಲಿ ವರದಿಯಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾಣಿಕ್ ಅಲಿ ಸುಮಾರು ನಲವತ್ತು ಲೀಟ‌ರ್ ಹಾಲಿನಿಂದ ಸ್ನಾನ ಮಾಡುವ ಮೂಲಕ ಪತ್ನಿಯಿಂದ ವಿಚ್ಛೇದನ ಸಿಕ್ಕಿದ್ದಕ್ಕಾಗಿ ಸಂಭ್ರಮಿಸಿದ್ದಾರೆ. ಹಾಗೂ ನಾನಿನ್ನೂ ಸ್ವತಂತ್ರ ಎಂದು ಎರಡು ಕೈ ಮೇಲೆತ್ತಿ ಕುಣಿದಾಡಿದ್ದಾರೆ.

ನನ್ನ ಹೆಂಡತಿ ತನ್ನ ಪ್ರಿಯಕರನೊಂದಿಗೆ ಎರಡು ಸಲ ಓಡಿಹೋಗಿದ್ದಳು. ಆದರೂ ಮಗಳ ಭವಿಷ್ಯಕ್ಕಾಗಿ ಅವಳನ್ನು ಕ್ಷಮಿಸಿ ಮನೆಗೆ ಕರೆತಂದಿದ್ದೆ. ಅವಳು ಮೂರನೇ ಸಲ ಅದೇ ತಪ್ಪನ್ನು ಮಾಡಿದಳು ಹಾಗಾಗಿ ವಿಚ್ಛೇದನ ಮಾರ್ಗ ಆರಿಸಿಕೊಳ್ಳಬೇಕಾಯಿತು. ಮಗಳೂ ಆಕೆಯೊಂದಿಗೆ ಇರುವುದರಿಂದ ನನಗೆ ನೆಮ್ಮದಿ ಸಿಕ್ಕಂತಾಗಿದೆ. ವಿಚ್ಛೇದನದ ನಂತರ ಹೊಸ ಜೀವನ ಆರಂಭಿಸುತ್ತಿರುವೆ ಎಂದು ಮಾಣಿಕ್ ಅಲಿ ಹೇಳಿದ್ದಾರೆ. ಮಾಣಿಕೆ ಅಲಿ ಹಾಲಿನಲ್ಲಿ ಸ್ನಾನ ಮಾಡುವ ವಿಡಿಯೊಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿರಾರು ಕಮೆಂಟ್‌ಗಳು ಹರಿದುಬಂದಿವೆ. ಹಾಲನ್ನು ಈ ರೀತಿ ವ್ಯರ್ಥ ಮಾಡಬಾರದು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಹೊಸ ಜೀವ ಆರಂಭಮಾಡಿ ನಿಮಗೆ ಒಳ್ಳೆಯದಾಗಲಿ ಎಂದು ಮತ್ತೆ ಕೆಲವರು ಹೇಳಿದ್ದಾರೆ. ನಿಮ್ಮ ಹೆಂಡತಿ ಎಷ್ಟು ಕಾಟ ಕೊಟ್ಟಿದ್ದಾಳೆ ಮಾರಾಯ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

About The Author

Leave a Reply