October 13, 2025
WhatsApp Image 2025-07-11 at 11.25.57 AM

ಪುತ್ತೂರು:  ಪುತ್ತೂರು- ಮಂಗಳೂರು ನಾನ್ ಸ್ಟಾಪ್ ಎಕ್ಸ್ ಪ್ರೆಸ್ ಸಂಚಾರ ಇಂದು ಜು.14 ರಂದು ಪ್ರಾರಂಭಗೊಳ್ಳಲಿದೆ.

ಪುತ್ತೂರು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಹೊರಡುವ ಬಸ್ಸು ಎಲ್ಲೂ ನಿಲುಗಡೆಯಿಲ್ಲದೆ ನೇರವಾಗಿ ಸ್ಟೇಟ್ ಬ್ಯಾಂಕ್ ಬಸ್‌ ನಿಲ್ದಾಣಕ್ಕೆ ತಲುಪಲಿದೆ. ಪ್ರತೀ ಒಂದು ಗಂಟೆಗೊಂದು ಬಸ್ ಹೊರಡಲಿದೆ. ಮಹಿಳೆಯರಿಗೆ ಈ ಬಸ್ ನಲ್ಲಿ ಶಕ್ತಿ ಯೋಜನೆಯನುಸಾರ ಉಚಿತವಾಗಿ ಪ್ರಯಾಣಿಸಬಹುದಾಗಿದೆ.  ಬೆಳಿಗ್ಗೆ 11.00 ಗಂಟೆಗೆ ನೂತನ ಬಸ್ ವ್ಯವಸ್ಥೆಗೆ ಶಾಸಕರು ಚಾಲನೆ ನೀಡಲಿದ್ದಾರೆ.

ಸುಮಾರು ಒಂದು ಗಂಟೆ ಅವಧಿಯಲ್ಲಿ ಬಸ್ ಪುತ್ತೂರಿನಿಂದ ಮಂಗಳೂರು ತಲುಪಲಿದೆ. ಸ್ವಂತ ವಾಹನ ಇದ್ದವರೂ ಈ ಬಸ್ಸಲ್ಲಿ ತೆರಳಬಹುದಾಗಿದೆ ಯಾಕೆಂದರೆ ಅತಿ ವೇಗದಲ್ಲಿ ಈ ಬಸ್ಸುಸಂಚರಿಸಲಿರುವ ಕಾರಣ ಸ್ವಂತ ವಾಹನದಷ್ಟೇ ಸಮಯದಲ್ಲಿ ಮಂಗಳೂರು ತಲುಪುತ್ತದೆ. ಹೊಸ ವ್ಯವಸ್ಥೆಯಲ್ಲಿ ಎಲ್ಲರೂ ಪ್ರಯಾಣಿಸುವ ಮೂಲಕ ಸಹಕಾರ ನೀಡಿ ಸರಕಾರಿ ವ್ಯವಸ್ಥೆಗೆ ಬೆಂಬಲ ನೀಡಬೇಕು.

About The Author

Leave a Reply