November 8, 2025
WhatsApp Image 2025-07-15 at 12.04.41 PM

ಉಡುಪಿ : ಇಂದು ಘೋರವಾದ ದುರಂತ ಒಂದು ಸಂಭವಿಸಿದ್ದು, ನಾಡ ದೋಣಿ ಮಗುಚಿ ಮೂವರುಮರುಕಾರರು. ಮೀನುಗಾರರು ನೀರು ಪಾಲಾಗಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.

ರಾಜ್ಯದಲ್ಲಿ ಅಪಾರ ಪ್ರಮಾಣದ ಮಳೆಯಾಗುತ್ತಿರುವುದರಿಂದ ಭಾರಿ ಪ್ರಮಾಣದಲ್ಲಿ ಹಳ್ಳಕೊಳ್ಳ ಮತ್ತು ನದಿಗಳು ತುಂಬಿ ಹರಿಯುತ್ತಿದ್ದು, ಆದರೂ ನಿರ್ಲಕ್ಷ ವಹಿಸಿ ಮೀನುಗರಾರು ಮೀನು ಹಿಡಿಯೋದಕ್ಕೆ ತೆರಳಿದ್ದಾರೆ.ನೀರು ಪಾಲಾದ ಮೂವರು ಮೀನುಗಾರರನ್ನು ಸುರೇಶ್ ಖಾರ್ವಿ (45) ರೋಹಿತ್ ಖಾರ್ವಿ (38) ಹಾಗೂ ಜಗ್ಗು ಅಲಿಯಾಸ್ ಜಗದೀಶ್ ಖಾರ್ವಿ (36) ಎಂದು ತಿಳಿದುಬಂದಿದೆ.

ಮೀನುಗಾರಿಕೆಗೆ ಮೂವರು ಮೀನುಗಾರರು ಸಮುದ್ರಕ್ಕೆ ಇಳಿದಿದ್ದರು. ಕಡಲಬ್ಬರ ಕಂಡು ಮೀನುಗಾರರು ವಾಪಸ್ ಆಗುತ್ತಿದ್ದರು. ಈ ವೇಳೆ ಓರ್ವ ಮೀನುಗಾರ ಅಲೆಗಳ ಅಬ್ಬರಕ್ಕೆ ಸಮುದ್ರಕ್ಕೆ ಬಿದ್ದಿದ್ದಾನೆ. ನೀರಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಇನ್ನಿಬ್ಬರು ಮುಂದಾಗಿದ್ದಾರೆ. ಈ ವೇಳೆ ಮೂವರು ಸಮುದ್ರ ಪಾಲಾಗಿದ್ದಾರೆ. ನಾ ಪತ್ತೆಯಾದ ಮೂರಿಗಾಗಿ ಸಮುದ್ರದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply