ಮಂಗಳೂರು: ಯುವತಿ ನಾಪತ್ತೆ..!!

ಮಂಗಳೂರು: ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದ ಹೊಯ್ಗೆ ಬಜಾರ್ ನಿವಾಸಿ ಯುವತಿ ಮನೆಗೆ ಹಿಂದಿರುಗದೆ ‌ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ಯುವತಿಯನ್ನು ಶಾಹಿನಾ ಬಾನು (23) ಎಂದು ಗುರುತಿಸಲಾಗಿದೆ.

ಸ್ನೇಹಿತರ ಜೊತೆಗೆ ಪೇಟೆಗೆ ಹೋಗಿ ಸುತ್ತಾಡಿ ಬರುವುದಾಗಿ ‌ತಿಳಿಸಿ ಮನೆಯಿಂದ ಹೋಗಿದ್ದು, ಮನೆಗೆ ವಾಪಸ್ಸು ಹಿಂದಿರುಗಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಮಾಡಲಾಗಿತ್ತು. ಆಕೆಯ ಸ್ನೇಹಿತೆಯ ಬಳಿ ವಿಚಾರಿಸಿದಾಗ ನಾಪತ್ತೆಯಾದ ಯುವತಿಯ ಜೊತೆ ಆಕೆ ಎಲ್ಲೂ ಹೋಗಿಲ್ಲ ಎಂಬುದು ಗೊತ್ತಾಗಿದೆ.

ಯುವತಿ ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಬ್ಯಾರಿ ಭಾಷೆ, ತುಳು ಭಾಷೆ, ಹಿಂದಿ, ಇಂಗ್ಲಿಷ್ ಬಲ್ಲವರಾಗಿದ್ದಾರೆ. ಯುವತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಪಾಂಡೇಶ್ವರ ಪೊಲೀಸು ಠಾಣೆಗೆ ಸಂಪರ್ಕಿಸಬಹುದಾಗಿದೆ.

Leave a Reply