August 19, 2025
WhatsApp Image 2025-08-18 at 9.19.43 AM

ಪುತ್ತೂರು: ಆ.12ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಳದ ಮನೆಯೊಂದರಲ್ಲಿ ನಡೆದ, ಸುಮಾರು 31 ಗ್ರಾಂ ಬಂಗಾರ ಮತ್ತು ರೂ.5000/- ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯನ್ನು ಈಶ್ವರಮಂಗಲದಲ್ಲಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ನೆಟ್ಟಣಿಗೆ ಮುಡೂರು ಗ್ರಾಮದ ನಿವಾಸಿ ದಯಾನಂದ್ ನಾಯ್ಕ ಎಂ (29) ಎಂದು ಗುರುತಿಸಲಾಗಿದೆ.

ಊರಿನಲ್ಲಿ ತಾನಾಯಿತು ತನ್ನ ಕೆಲಸವಾಯಿತು ಯಾರ ತಂಟೆ ತಕರಾರಿಗೆ ಹೋಗದ ಕೆಂಪು ಕಲ್ಲು ಲೋಡಿಂಗ್ ನ್ನು ತನ್ನ ಕಾಯಕವಾಗಿ ನಂಬಿದ್ದ ದಯಾನಂದ ಕೆಲವು ಸಮಯದಿಂದ ಕೆಂಪು ಕಲ್ಲು ಕೆಲಸ ಇಲ್ಲದ ಕಾರಣ ತನ್ನ ಮನೆ ಖರ್ಚು, ಬ್ಯಾಂಕ್ ಲೋನ್ ಕಟ್ಟಲು ಸಾಧ್ಯವಾಗದೆ ಬೇರೆ ವಿದಿಯಿಲ್ಲದೆ ಕಳ್ಳತನ ಮಾಡಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಆರೋಪಿಯಿಂದ 30.120 ಗ್ರಾಂ ಬಂಗಾರ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ಡಿಸ್ಕವರಿ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಆರೋಪಿ ಪತ್ತೆ ಕಾರ್ಯದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ಮತ್ತು ಪೊಲೀಸ್ ನಿರೀಕ್ಷಕರಾದ ರವಿ ಬಿ ಎಸ್ ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಜಂಬುರಾಜ್ ಮಹಾಜನ್ ರವರ ನೇತೃತ್ವದ, ಎಎಸ್‌ಐ ಚಂದ್ರಶೇಖರ್, ಹೆಚ್.ಸಿ 1”ಪ್ರವೀಣ್, ಹೆಚ್.ಸಿ ಮಧು, ಹೆಚ್.ಸಿ ಹರೀಶ್, ಹೆಚ್.ಸಿ ಸುಬ್ರಹ್ಮಣ್ಯ, ಪಿಸಿ ಆಕಾಶ್, ಪಿಸಿ ಯುವರಾಜ್, ಪಿಸಿ ಶರಣಪ್ಪ ಪಾಟೀಲ್‌, ಚಾಲಕರಾದ ಎಆರ್ ಎಸ್ ಐ ಯಜ್ಞ, ಹೆಚ್.ಜಿ ಹರಿಪ್ರಸಾದ್ ಮತ್ತು ಹೆಚ್.ಜಿ ನಿತೇಶ್‌ರವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.

About The Author

Leave a Reply