
ಬೆಂಗಳೂರು: ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸಿದ್ದಕ್ಕೆ ಯೂಟ್ಯೂಬರ್ ಸಮೀರ್ ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆಯಿದೆ.
ಬನ್ನೇರುಘಟ್ಟದಲ್ಲಿರುವ ಸಮೀರ್ ಬಾಡಿಗೆ ಮನೆಗೆ ಧರ್ಮಸ್ಥಳ ಪೊಲೀಸರು ಆಗಮಿಸಿದ್ದಾರೆ. ಈಗಾಗಲೇ ಸಮೀರ್ ಮನೆಯನ್ನು ಪೊಲೀಸರು ಸುತ್ತುವರೆದಿದ್ದಾರೆ.
ಇಂದು ಬೆಳಗ್ಗೆ ಧರ್ಮಸ್ಥಳ ಪೊಲೀಸರು ಬನ್ನೇರುಘಟ್ಟಕ್ಕೆ ಆಗಮಿಸಿದ್ದಾರೆ. ಆದರೆ ಖಚಿತವಾಗಿ ವಿಳಾಸ ಸಿಕ್ಕಿರಲಿಲ್ಲ, ಈಗ ಮನೆಯನ್ನು ಸುತ್ತುವರೆದು ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಈಗಾಗಲೇ ಸಮೀರ್‌ಗೆ ಮೂರು ಬಾರಿ ಪೊಲೀಸರು ನೋಟಿಸ್ ನೀಡಿದ್ದರು. ಮೂರು ಬಾರಿ ನೋಟಿಸ್ ನೀಡಿದರೂ ಪ್ರತಿಕ್ರಿಯೆ ನೀಡಿಲ್ಲ.ಹೀಗಾಗಿ ವಾರೆಂಟ್ ಪಡೆದು ಪೊಲೀಸರು ಬಂಧನಕ್ಕೆ ಆಗಮಿಸಿದ್ದಾರೆ.