
ಬಿಎಂಟಿಸಿ ಬಸ್ ಹರಿದು 11 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬೆಂಗಳೂರಿನ ಕೆ ಆರ್ ಮಾರ್ಕೆಟ್ ಬಳಿಯಲ್ಲಿ ಈ ದುರ್ಘಟನೆ ನಡೆದಿದೆ. ತಂದೆ ಜೊತೆಗೆ ದ್ವಿಚಕ್ರ ವಾಹನದಲ್ಲಿ ಬಾಲಕ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ದೇವಸ್ಥಾನದ ಪೂಜಾರಿ ದಿಲೀಪ್ ಕುಮಾರ್ ಪುತ್ರ ಶಬರೀಶ್(11) ಸಾವನ್ನಪ್ಪಿದ್ದಾರೆ.
ಜಿಎಂ ಪಾಳ್ಯದ ನಿವಾಸಿಯಾಗಿರುವ ಪೂಜಾರಿ ದಿಲೀಪ್ ಕುಮಾರ್ ಜೊತೆಗೆ ಪುತ್ರ ಶಬರೀಶ್ ತೆರಳುತ್ತಿದ್ದರು. ಮಗನ ಜೊತೆಗೆ ಕೆ ಆರ್ ಮಾರ್ಕೆಟ್ ಗೆ ದಿಲೀಪ್ ಕುಮಾರ್ ತೆರಳಿದ್ದರು. ಈ ವೇಳೆ ಬಸ್ಸಿಗೆ ಬಿಎಂಟಿಸಿ ಬಸ್ ಟಚ್ ಆಗಿದೆ. ಈ ಸಂದರ್ಭದಲ್ಲಿ ಪುತ್ರ ಶಬರೀಶ್ ಕೆಳಗೆ ಬಿದ್ದಿದ್ದಾನೆ. ಅವರ ಮೇಲೆ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.