October 13, 2025
WhatsApp Image 2025-08-30 at 11.32.54 AM

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ , ಡಾ. ಡಿ. ವೀರೇಂದ್ರ ಹೆಗ್ಗಡೆ ,ಡಿ. ಹರ್ಷೇಂದ್ರ ಕುಮಾರ್ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಅವಹೇಳನಾಕಾರಿ ಮಾತುಗಳನ್ನು ಆಡದಂತೆ , ವರದಿ ಪ್ರಕಟಿಸದಂತೆ ಸಿಟಿ ಸಿವಿಲ್ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಜೊತೆಗೆ, ಆ ವಿಡಿಯೋಗಳನ್ನು ತಕ್ಷಣವೇ ಡಿಲೀಟ್ ಮಾಡಲು ಆದೇಶಿಸಿದೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ಪ್ರಕಟವಾದ ಮಾನಹಾನಿಕರ ವಿಡಿಯೋಗಳ ವಿಷಯದಲ್ಲಿ ಡಿ.ಹರ್ಷೇಂದ್ರ ಕುಮಾರ್ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯವು ಏಕಪಕ್ಷೀಯ ತಡೆಯಾಜ್ಞೆ ನೀಡಿತ್ತು. ಆದರೆ, ಥರ್ಡ್ ಐ ಯೂಟ್ಯೂಬ್ ಚಾನಲ್ ಇದನ್ನು “ಗ್ಯಾಗ್ ಆರ್ಡರ್” ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಿಟ್ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಿತು. ಸುಪ್ರೀಂ ಕೋರ್ಟ್ ಈ ವಿಷಯವನ್ನು ಹೈಕೋರ್ಟ್‌ನಲ್ಲಿ ಇತ್ಯರ್ಥಗೊಳಿಸಲು ಸೂಚಿಸಿತು.

ಕುಡ್ಲ ರಾಂ ಪೇಜ್ ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿತು, ಇದನ್ನು ಪುರಸ್ಕರಿಸಿದ ಹೈಕೋರ್ಟ್ ಸಿಟಿ ಸಿವಿಲ್ ಕೋರ್ಟ್‌ನ ಏಕಪಕ್ಷೀಯ ಆದೇಶವನ್ನು ರದ್ದುಗೊಳಿಸಿ ಮರುತನಿಖೆಗೆ ಆದೇಶಿಸಿತು. ಇದರ ವಿರುದ್ಧ ಡಿ. ಹರ್ಷೇಂದ್ರ ಕುಮಾರ್ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಸಲ್ಲಿಸಿದರು. ಸುಪ್ರೀಂ ಕೋರ್ಟ್, ದಾಖಲೆಗಳ ಆಧಾರದ ಮೇಲೆ ಎರಡು ವಾರಗಳಲ್ಲಿ ಪುನಃ ಪರಿಶೀಲನೆಗೆ ಆದೇಶಿಸಿತು.ಸಿಟಿ ಸಿವಿಲ್ ಕೋರ್ಟ್ ಐದು ದಿನಗಳ ಕಾಲ ವಾದ-ವಿವಾದ ಆಲಿಸಿ, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ. ಸೇರಿದಂತೆ ಇತರರಿಂದ ಪ್ರಕಟವಾದ ಮಾನಹಾನಿಕರ ವಿಡಿಯೊಗಳನ್ನು ನ್ಯಾಯಾಲಯದಲ್ಲಿ ವೀಕ್ಷಿಸಿ ತಡೆಯಾಜ್ಞೆ ನೀಡಿದ್ದು, ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಹೇಳಿದೆ.

ಡಿ.ಹರ್ಷೇಂದ್ರ ಕುಮಾರ್ ಪರವಾಗಿ ಹೈಕೋರ್ಟ್ ವಕೀಲ ರಾಜಶೇಖರ್ ಹಿಲ್ಯಾರ್ ಸುದೀರ್ಘ ವಾದ ಮಂಡಿಸಿದರು

About The Author

Leave a Reply