December 4, 2025
WhatsApp Image 2025-08-27 at 9.16.32 AM

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ವಿದ್ಯಾಮಾನಗಳ ನಡುವೆ, ಇಂದು ಎಸ್ಐಟಿಗೆ ಬರೋಬ್ಬರಿ 500 ಪುಟಗಳ ದಾಖಲೆಯನ್ನು ಸೌಜನ್ಯ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ನೀಡಿದ್ದಾರೆ.

ಎಸ್ಐಟಿ ಕಚೇರಿಗೆ ತೆರಳಿದಂತ ಗಿರೀಶ್ ಮಟ್ಟಣ್ಣನವರ್ ಅವರು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅಸಹಜ ಸಾವುಗಳ ಕುರಿತು ಸರಿಯಾದ ತನಿಖೆ ನಡೆದಿಲ್ಲ. ಆ ಸಾವುಗಳ ಕುರಿತಂತೆ ತನಿಖೆ ನಡೆಸುವಂತೆ ಗಿರೀಶ್ ಮಟ್ಟಣ್ಣನವರ್ ಎಸ್ಐಟಿಗೆ ದಾಖಲೆಗಳ ಮೂಲಕ ಮನವಿ ಮಾಡಿದ್ದಾರೆ.

ಧರ್ಮಸ್ಥಳ ಪೊಲೀಸರು ಅಸಹಜ ಸಾವಿನ ಕುರಿತಂತೆ ತನಿಖೆ ನಡೆಸಲು ವಿಫಲವಾಗಿದದಾರೆ. ಸರಿಯಾಗಿ ತನಿಖೆ ನಡೆಸಿಲ್ಲ. ನನಗೆ ತನಿಖೆ ನಡೆಯದೇ ಇರುವುದಕ್ಕೆ ಕಾರಣ ಏನು? ಆ ಬಗ್ಗೆ ನಮಗೆ ಅನುಮಾನವಿದೆ ಎಂಬುದಾಗಿ ದಾಖಲೆ ಸಲ್ಲಿಸುವ ಮೂಲಕ ಒತ್ತಾಯಿಸಿದ್ದಾರೆ.

ಮತ್ತೊಂದೆಡೆ ಗಿರೀಶ್ ಮಟ್ಟಣವರು ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸುತ್ತಿದ್ದಾಂತೆ, ಧರ್ಮಸ್ಥಳ ಪಂಚಾಯ್ತಿ ದಾಖಲೆ ಪೋರ್ಜರಿ ಬಗ್ಗೆಯೂ ಎಸ್ಐಟಿ ತನಿಖೆ ಚುರುಕುಗೊಳಿಸಿದೆ. ಅಲ್ಲದೇ ಎಸ್ಐಟಿಯಿಂದ ಧರ್ಮಸ್ಥಳ ಪಂಚಾಯ್ತಿ ಅಧಿಕಾರಿಗಳಿಗೆ ಬುಲಾವ್ ನೀಡಲಾಗಿದೆ. ಹೀಗಾಗಿ ಎಸ್ಐಟಿ ಕಚೇರಿಗೆ ಧರ್ಮಸ್ಥಳ ಗ್ರಾಮ ಪಂಚಾಯ್ತಿಯ ಅಧಿಕಾರಿ, ಸಿಬ್ಬಂದಿಗಳು ಆಗಮಿಸಿದ್ದಾರೆ ಎನ್ನಲಾಗುತ್ತಿದೆ.

About The Author

Leave a Reply