April 22, 2026
WhatsApp Image 2026-04-22 at 5.23.51 PM

ಉಡುಪಿ ಜಿಲ್ಲೆಯ  ಮೂಡನಿಡಂಬೂರು ಗ್ರಾಮದ ಆದಿವುಡುಪಿ ಕೃಷಿ ಉತ್ಪನ ಮಾರುಕಟ್ಟೆಯ ಹಿಂಬಾಗದ ಖಾಸಗಿ ಜಾಗದಲ್ಲಿದ್ದ ಪಾಳುಬಾವಿಯಲ್ಲಿ ಕೊಳೆತಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ.  ಕಳೇಬರ ಗುರುತಿಸಲಾಗದಷ್ಟು ಕೊಳೆತು ಹೋಗಿದ್ದು, ವ್ಯಕ್ತಿ ಹದಿನೈದು ದಿನಗಳ ಹಿಂದೆಯೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತನ ವಾರಸುದಾರರು ಇದ್ದಲ್ಲಿ ಉಡುಪಿ  ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.  ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರ ಸಹಕಾರದಿಂದ  ಅಗ್ನಿಶಾಮಕ ದಳ ಹಾಗೂ ಪೊಲೀಸರ ನೆರವಿನಿಂದ ಬಾವಿಯಿಂದ ಕಳೇಬರವನ್ನು ಮೇಲಕೆತ್ತಲಾಯಿತು. ಮಣಿಪಾಲ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ಮರಣೋತ್ತರ ಪ್ರಕ್ರಿಯೆ ನಡೆಸಲಾಗಿದೆ. ನಗರ ಪೋಲಿಸ್ ಠಾಣೆಯ‌ ಎಸ್ ಐ ನಾರಾಯಣ್,  ಆರಕ್ಷಕ ಸಿಬ್ಬಂದಿ ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು. ವಿಧಿ ವಿಜ್ಞಾನ ತಜ್ಞರು ಸ್ಥಳದಲ್ಲಿದ್ದು ಪರಿಶೀಲಿಸಿದರು. 

About The Author

Leave a Reply