April 25, 2026
WhatsApp Image 2026-04-25 at 11.43.21 AM

ನವದೆಹಲಿ: ನಿಯಮಗಳನ್ನು ನಿರಂತರ ಉಲ್ಲಂಘನೆ ಮಾಡಿದ್ದಕ್ಕೆ ಏಪ್ರಿಲ್ 24 ರಿಂದ ಜಾರಿಗೆ ಬರುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ನೀಡಿದ್ದ ಬ್ಯಾಂಕಿಂಗ್ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದುಗೊಳಿಸಿದೆ.

ಬ್ಯಾಂಕಿನ ವ್ಯವಹಾರಗಳು ಹಾನಿಕಾರಕ ರೀತಿಯಲ್ಲಿ ನಡೆದಿದ್ದು, ಇದು ಠೇವಣಿದಾರರು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಬ್ಯಾಂಕ್ ಪದೇ ಪದೇ ಮಾರ್ಗಸೂಚಿಗಳನ್ನು ಅನುಸರಿಸುವಲ್ಲಿ ವಿಫಲವಾಗಿದೆ ಎಂದು ಹೇಳಿ ಆರ್‌ಬಿಐ ಬ್ಯಾಂಕಿನ ಪರವಾನಗಿಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ.ಈ ಕ್ರಮವು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಮಾತ್ರ ಅನ್ವಯಿಸುತ್ತದೆ. ಪೇಟಿಎಂ ಆಪ್ (Paytm App), ಪೇಟಿಎಂ ಯುಪಿಐ (UPI), ಮತ್ತು ಇತರ ಮರ್ಚೆಂಟ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆರ್‌ಬಿಐ ಅಡಿಯಲ್ಲಿ ಬರುವ ವಿಶೇಷ ಬ್ಯಾಂಕ್‌ ಆಗಿತ್ತು.ಇದು ಸಾಮಾನ್ಯ ಬ್ಯಾಂಕುಗಳಿಗಿಂತ ಸ್ವಲ್ಪ ಭಿನ್ನವಾಗಿ ಕಾರ್ಯನಿರ್ವಹಿಸುತ್ತಿತ್ತು.ಇವು ಗ್ರಾಹಕರಿಂದ ಠೇವಣಿ ಸ್ವೀಕರಿಸಲು ಅನುಮತಿ ಇತ್ತು. ಆದರೆ ಸಾಲ ನೀಡಲು ಅಥವಾ ಕ್ರೆಡಿಟ್ ಕಾರ್ಡ್ ನೀಡಲು ಇವುಗಳಿಗೆ ಅನುಮತಿ ಇರುವುದಿಲ್ಲ.ಈ ಬ್ಯಾಂಕ್ ಖಾತೆಯಲ್ಲಿ ಒಬ್ಬ ಗ್ರಾಹಕರು ಗರಿಷ್ಠ 2 ಲಕ್ಷದವರೆಗೆ ಮಾತ್ರ ಹಣವನ್ನು ಇಟ್ಟುಕೊಳ್ಳಲು ಅವಕಾಶವಿತ್ತು. ಇದು ಉಳಿತಾಯ ಖಾತೆ , ಡೆಬಿಟ್ ಕಾರ್ಡ್, ಆನ್‌ಲೈನ್ ಬ್ಯಾಂಕಿಂಗ್ ಮತ್ತು ವ್ಯಾಲೆಟ್ ಸೇವೆಗಳನ್ನು ನೀಡುತ್ತಿತ್ತು. ಇದಕ್ಕೆ ಸಾಮಾನ್ಯ ಬ್ಯಾಂಕುಗಳಂತೆ ಹೆಚ್ಚಿನ ಭೌತಿಕ ಶಾಖೆಗಳಿರಲಿಲ್ಲ. ಮೊಬೈಲ್ ಆಪ್ ಮೂಲಕವೇ ಎಲ್ಲ ವ್ಯವಹಾರಗಳು ನಡೆಯುತ್ತಿದ್ದವು.

About The Author

Leave a Reply