May 27, 2026
WhatsApp Image 2026-05-25 at 7.40.45 PM (1)

ಮಂಗಳೂರು : ಶಕ್ತಿನಗರದ ನಾಲ್ಯಪದವು ಶಾಲಾ ಮೈದಾನದಲ್ಲಿ ಭಾನುವಾರ ನಡೆದ ವಲಯದ ಪ್ರತಿಷ್ಠಿತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ’ಎಸ್.ಪಿ.ಎಲ್ ನ ತೃತೀಯ ಆವೃತ್ತಿಯಲ್ಲಿ ಕಾನಡ್ಕ ನೈಟ್ ರೈಡರ್ಸ್ ತಂಡ ರನ್ನರ್ಸ್ ಅಪ್ ಪ್ರಶಸ್ತಿ ಪಡೆದಿದೆ. ತಂಡವು ರನ್ನರ್ಸ್ ಅಪ್ ಟ್ರೋಫಿ ಹಾಗೂ ನಗದು ಬಹುಮಾನವನ್ನು ಪಡೆದುಕೊಂಡಿತು. ಕಾನಡ್ಕ ನೈಟ್ ರೈಡರ್ಸ್ ತಂಡದ ನಾಯಕ ದೀಕ್ಷಿತ್ ಪೂಜಾರಿ ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಷನ ನೀಡಿ ’ಮ್ಯಾನ್ ಆಫ್ ದ ಸೀರಿಸ್’ ಪ್ರಶಸ್ತಿ ಪಡೆದರು.

ನಿರಂತರವಾಗಿ ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬರುತ್ತಿದ್ದ ಕಾನಡ್ಕ ನೈಟ್ ರೈಡರ್ಸ್ ತಂಡ ರೋಚಕ ಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಲೀಗ್ ಹಂತದ ೩ ಪಂದ್ಯದಲ್ಲಿ ೨ ಜಯ ಹಾಗೂ ೧ ಸೋಲಿನೊಂದಿಗೆ, ಗ್ರೂಪ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು. ಬಳಿಕ ಕ್ವಾಲಿಫೈಯರ್ ೧ ಪಂದ್ಯದಲ್ಲಿ ಗುಂಡಳಿಕೆ ಟೈಗರ್ಸ್ ತಂಡವನ್ನು ಸೋಲಿಸಿ, ನೇರವಾಗಿ ಫೈನಲ್ ಪ್ರವೇಶಿಸಿತು. ಬಳಿಕ ಫೈನಲ್ ಪಂದ್ಯದಲ್ಲಿ ಲಗಾನ್ ಸ್ಪಾರ್ಟನ್ಸ್ ತಂಡದ ವಿರುದ್ಧ ಸೋಲನ್ನು ಅನುಭವಿಸಿತು.

ಜೆರ್ಸಿ ಸಮವಸ್ತ್ರ ಬಿಡುಗಡೆ ಸಮಾರಂಭ :
ಜೆರ್ಸಿ ಸಮವಸ್ತ್ರ ಬಿಡುಗಡೆ ಹಾಗೂ ಅನಾವರಣ ಸಮಾರಂಭವು ಶನಿವಾರ ನಡೆಯಿತು. ನೀಲಿ, ಹಳದಿ ಹಾಗೂ ಬಿಳಿ ಬಣ್ಣ ಮಿಶ್ರಿತ ಆಕರ್ಷಕ ಸಮವಸ್ತ್ರವನ್ನು ತಂಡ ಸದಸ್ಯರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಲಾಯಿತು. ಅಂಡರ್ ಆರ್ಮ್ ಕ್ರಿಕೆಟ್ ನಲ್ಲಿ ಮಹತ್ತರ ಸಾಧನೆಗೈದಿರುವ ಶೈಲೇಶ್ ಕುಲಾಲ್, ಜಯಂತ್ ಸುವರ್ಣ ಹಾಗೂ ಮಂಜುನಾಥ್, ಈಜು ಸ್ಪರ್ಧೆರ್ಗಳಲ್ಲಿ ಹಲವು ಪದಕಗಳನ್ನು ಪಡೆದು ಅತ್ಯುನ್ನತ ಸಾಧನೆ ಮಾಡಿರುವ ೯ ವರ್ಷದ ಹಿಮಾನಿ ಪಿ. ಸುವರ್ಣ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬಿ.ಜೆ.ಪಿ ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಆಶೀರ್ವಾದ್ ಫಾನ್ಸಿ ಮಾಲೀಕ ಫಿಲಿಪ್ ಸಿಕ್ವೇರ, ಕೃಷಿಕ ವಿಜಯ್ ಶೆಣೈ, ತಂಡದ ಮೆಂಟರ್ ಗಳಾದ ದಯಾನಂದ ನಾಯ್ಕ್ ಹಾಗೂ ಪ್ರಸಾದ್. ಜಿ, ತಂಡದ ಮಾಲಕರಾದ ಸುಹಾಸ್ ಕೋಟ್ಯಾನ್ ಮತ್ತು ಅಭಿಷೇಕ್, ದಿನೇಶ್ ಪೂಜಾರಿ, ಹೂವಿನ ಅಂಗಡಿ ಮಾಲೀಕ ಪ್ರಸಾದ್, ತಂಡದ ಮ್ಯಾನೇಜರ್ ರಕ್ಷಕ್ ಪೂಜಾರಿ, ಪ್ರೊಡಕ್ಷನ್ ಹೆಡ್ ಆದರ್ಶ್, ತಂಡದ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಾನಡ್ಕ ನೈಟ್ ರೈಡರ್ಸ್ ತಂಡದ ಎಲ್ಲಾ ಆಟಗಾರರಿಗೆ ಪೂರ್ಣ ಸಮವಸ್ತ್ರ ವಿತರಿಸಲಾಯಿತು. ಶಿಶಿರ್ ಕಾರ್ಯಕ್ರಮ ನಿರೂಪಿಸಿದರು.

ವರದಿ : ಧನುಷ್ ಕುಲಾಲ್ ಶಕ್ತಿನಗರ

About The Author

Leave a Reply